Friday, May 17, 2024
spot_imgspot_img
spot_imgspot_img

ಲಂಡನ್‌ನಲ್ಲಿ ಭಾರತೀಯ ಮೂಲದ ಯುವತಿಯ ಬರ್ಬರ ಹತ್ಯೆ

- Advertisement -G L Acharya panikkar
- Advertisement -

ಚಾಕುವಿನಿಂದ ಇರಿದು ಭಾರತೀಯ ಮೂಲದ ಮಹಿಳೆಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಲಂಡನ್‌ನ ವೆಂಬ್ಲಿ ಪ್ರದೇಶದ ನೀಲ್ಡ್‌ ಕ್ರೆಸೆಂಟ್‌ನಲ್ಲಿ ನಡೆದಿದೆ.

ಕೊಲೆಯಾದ ಯುವತಿಯನ್ನು 27 ವರ್ಷದ ಕೊಂಥಮ್ ತೇಜಸ್ವಿನಿ ಎಂದು ಗುರುತಿಸಲಾಗಿದ್ದು, ಈಕೆ ತೆಲಂಗಾಣದ ಹೈದರಾಬಾದ್‌ ಮೂಲದವವರು. ಈಕೆಯ ಜೊತೆಗೆ ಇನ್ನೊಬ್ಬಳು 28 ವರ್ಷದ ಯುವತಿ ಮೇಲೆಯೂ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾಳೆ. ಕೊಲೆ ಮಾಡಿದ ವ್ಯಕ್ತಿಯೂ ಕೂಡ ಈಕೆ ವಾಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲೇ ವಾಸವಿದ್ದ ಎಂದು ತಿಳಿದು ಬಂದಿದೆ.

ಜೂನ್‌ 13 ರಂದು ಈ ಘಟನೆ ನಡೆದಿದ್ದು, ಚೂರಿ ಇರಿತದ ಬಳಿಕ ಇಬ್ಬರು ಮಹಿಳೆಯರು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ ಎಂದು ಹೇಳಿ ಲಂಡನ್ ಆಂಬುಲೆನ್ಸ್ ಸರ್ವೀಸ್‌ಗೆ ಬೆಳಗ್ಗೆ ಕರೆ ಬಂದಿದೆ. ಈ ವೇಳೆ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ತೇಜಸ್ವಿ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಕಸ್ಟಡಿಗೆ ಪಡೆದಿದ್ದಾರೆ. ನಂತರ ಮತ್ತೊಬ್ಬ ವ್ಯಕ್ತಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆಗೊಳಿಸಿದ್ದು, ಪ್ರಕರಣದಲ್ಲಿ ಈತ ಬೇಕಾಗಿದ್ದಾನೆ ಎಂದು ಘೋಷಿಸಿದ್ದರು. ಇದಾದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದು, ಇದರ ಜೊತೆಗೆ ಒಬ್ಬ ಮಹಿಳೆ ಹಾಗೂ ಪುರುಷನನ್ನು ಕೂಡ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಕೊಲೆ ಆರೋಪಿಯೂ ಬ್ರೆಜಿಲಿಯನ್ ಆಗಿದ್ದು, ಆತನೂ ಕೂಡ ಕೊಲೆಯಾದವರು ವಾಸಿಸುತ್ತಿದ್ದ ಪ್ಲಾಟ್‌ನಲ್ಲೇ ವಾಸವಿದ್ದ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!