Thursday, July 23, 2026
spot_imgspot_img
spot_imgspot_img

ಬಂಟ್ವಾಳ: ರಸ್ತೆ ಬದಿಯ ತಡೆಗೋಡೆಗೆ ಕಾರು ಡಿಕ್ಕಿ; ಇಬ್ಬರಿಗೆ ಗಾಯ

- Advertisement -
- Advertisement -
vtv vitla

ಬಂಟ್ವಾಳ: ರಸ್ತೆ ಬದಿಯ ಅಂಗಡಿಯ ತಡೆಗೋಡೆಗೆ ಕಾರು ಗುದ್ದಿ ಚಾಲಕ ಸಹಿತ ಇಬ್ಬರು ಗಾಯಗೊಂಡ ಘಟನೆ ಬಿ ಮೂಡ ಗ್ರಾಮದ ಗೂಡಿನಬಳಿ ನಡೆದಿದೆ.

ಕಾರು ಚಾಲಕ, ಬಿ ಸಿ ರೋಡಿನ ಹಿರಿಯ ನ್ಯಾಯವಾದಿ, ನಂದಾವರ ನಿವಾಸಿ ಹಾತಿಂ ಅಹ್ಮದ್ ಅವರು ಕಾರು ಚಲಾಯಿಸುತ್ತಿದ್ದ ವೇಳೆ ಅನಾರೋಗ್ಯಕ್ಕೀಡಾಗಿ ನಿಯಂತ್ರಣ ಮೀರಿ ಕಾರು ರಸ್ತೆ ಬದಿಯ ಅಂಗಡಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಿಂದ ತೀವ್ರ ಗಾಯಗೊಂಡಿರುವ ಚಾಲಕ, ನ್ಯಾಯವಾದಿ ಹಾತಿಂ ಅಹ್ಮದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು ಸಹ ಪ್ರಯಾಣಿಕ ತಾಜುದ್ದೀನ್ ಅವರಿಗೆ ಬಿ ಸಿ ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

- Advertisement -

Related news

error: Content is protected !!