Monday, April 29, 2024
spot_imgspot_img
spot_imgspot_img

ಬಂಟ್ವಾಳ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಾಮೋಸ; 6.30 ಲಕ್ಷ ಪಡೆದು ವಂಚನೆ

- Advertisement -G L Acharya panikkar
- Advertisement -

ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 6.30 ಲಕ್ಷ ಪಡೆದು ವಂಚಿಸಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ಬಿಜೈ ಹೊಸ ರಸ್ತೆ 2ನೇ ಅಡ್ಡ ರಸ್ತೆ ನಿವಾಸಿ ವಿ. ಆರ್‌. ಸುಧೀರ್‌ ರಾವ್‌ ಪ್ರಕರಣದ ಆರೋಪಿ.

ಬಂಟ್ವಾಳದ ಕಳ್ಳಿಗೆ ಗ್ರಾಮದ ತೊಡಂಬಿಲದ ನಿವಾಸಿ ನೆಲ್ಲಿ ಲೀನಾ ಮೊಂತೊರೊ ಅವರಿಗೆ ಅವರ ಸಂಬಂಧಿ ಮಹಿಳೆ ಮೂಲಕ ಸುಧೀರ್‌ ರಾವ್‌ ನ ಪರಿಚಯವಾಗಿತ್ತು. ಈತ ಮಹಿಳೆಯ ಮಕ್ಕಳಿಗೆ ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ,ಬ್ಯಾಂಕ್‌ ಖಾತೆಗೆ ಹಲವು ಬಾರಿ ಮೊತ್ತವನ್ನು ಹಾಕಿಸಿಕೊಂಡಿದ್ದಾರೆ.

ಫೆ. 22ರಂದು ಬಿ.ಸಿ.ರೋಡಿನಲ್ಲಿ 2,83,800 ರೂ., 28ರಂದು ಆನ್‌ಲೈನ್‌ ಮೂಲಕ 50 ರೂ. ಹಾಗೂ 84,950 ರೂ, ಜತೆಗೆ ಬೇರೆ ಬೇರೆ ದಿನಗಳಲ್ಲಿ 71 ಸಾವಿರ ರೂ., 60 ಸಾವಿರ ರೂ., 16 ಸಾವಿರ ರೂ., 2,500 ರೂ., 2,100 ರೂ., 49 ಸಾವಿರ ರೂ, 45 ಸಾವಿರ ರೂ.ಗಳನ್ನು ಬ್ಯಾಂಕೊಂದರ ಬೆಂಗಳೂರು ಶಾಖೆಯ ಉಳಿತಾಯ ಖಾತೆಗೆ ಹಾಕಿಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.

ಮಾ. 19ರಂದು ಮಕ್ಕಳನ್ನು ಮುಂಬಯಿಗೆ ಬರ ಹೇಳಿ ಅಲ್ಲಿ ಅವರಿಂದ 15,600 ರೂ. ಪಡೆದು ಬಲ್ಗೇರಿಯಾದಲ್ಲಿ ಚಳಿ ಇದ್ದು ಜಾಕೆಟ್‌ ತರುವುದಾಗಿ ಹೇಳಿ ಹೋದವನು ಪರಾರಿಯಾಗಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ. ಆತನ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದರೆ ಸ್ವಿಚ್ಚ್ ಆಫ್‌ ಬರುತ್ತಿದೆ ಎನ್ನಲಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ

- Advertisement -

Related news

error: Content is protected !!