Tuesday, November 10, 2026
spot_imgspot_img
spot_imgspot_img

ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ: 1,364 ಔಷಧಿಗಳ ಪರಿಷ್ಕೃತ ದರ ಪ್ರಕಟಿಸಿದ ಕೇಂದ್ರ ಸರ್ಕಾರ

- Advertisement -
- Advertisement -

ನವದೆಹಲಿ: ಕ್ಯಾನ್ಸರ್‌ ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದ್ದು, ಸಾವಿರಕ್ಕೂ ಹೆಚ್ಚು ಔಷಧಿಗಳ ಪರಿಷ್ಕೃತ ದರ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ನ.09 ರಿಂದಲೇ ಭಾರತದಾದ್ಯಂತ 1,364 ಬಗೆಯ ಕ್ಯಾನ್ಸರ್ ವಿರೋಧಿ ಔಷಧಿಗಳ ಪರಿಷ್ಕೃತ MRP ಜಾರಿಗೆ ಬಂದಿದ್ದು, ಇದರಿಂದ ರೋಗಿಗಳಿಗೆ ಕ್ಯಾನ್ಸರ್ ಚಿಕಿತ್ಸೆ ಹೆಚ್ಚು ಕೈಗೆಟುಕುವಂತಾಗಲಿದೆ. ಅಗತ್ಯ ಚಿಕಿತ್ಸೆಗಳನ್ನು ಹೆಚ್ಚು ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ, 137 ಕ್ಯಾನ್ಸರ್ ಔಷಧಿಗಳ ಮೇಲಿನ ವ್ಯಾಪಾರ ಲಾಭಾಂಶಕ್ಕೆ ಮಿತಿ ವಿಧಿಸಲು ‘ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ’ ತೆಗೆದುಕೊಂಡ ನಿರ್ಧಾರದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪರಿಷ್ಕೃತ MRPಗಿಂತ ಹೆಚ್ಚಿನ ಹಣವನ್ನು ರೋಗಿಗಳಿಂದ ವಸೂಲಿ ಮಾಡುವ ಔಷಧಿ ವ್ಯಾಪಾರಿಗಳು ಮತ್ತು ಆಸ್ಪತ್ರೆ ಔಷಧಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಈ ನಿರ್ಧಾರವು ಕ್ಯಾನ್ಸರ್ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಹಕಾರಿಯಾಗಲಿದೆ.

NPPA(ಎನ್‌ಪಿಪಿಎ)ಯು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಯ್ದ ಕ್ಯಾನ್ಸರ್ ಔಷಧಗಳಿಗೆ ವ್ಯಾಪಾರ ಲಾಭಾಂಶದ(ಟ್ರೇಡ್ ಮಾರ್ಜಿನ್) ಮಿತಿಗಳನ್ನು ನಿಗದಿಪಡಿಸಿದೆ, ಇದರ ಪರಿಣಾಮವಾಗಿ ಹಲವಾರು ಔಷಧೀಯ ರೂಪಕಗಳ ಬೆಲೆಗಳಲ್ಲಿ ಗಣನೀಯ ಇಳಿಕೆಯಾಗಿದೆ.

ಒಟ್ಟು 85 ಔಷಧಿ ಕಂಪನಿಗಳು 121 ಔಷಧಿಗಳಿಗೆ ಸಂಬಂಧಿಸಿದ 1,364 ಕ್ಯಾನ್ಸರ್ ವಿರೋಧಿ ಔಷಧಿ ರೂಪಕಗಳ ಪರಿಷ್ಕೃತ MRP ವರದಿ ಮಾಡಿವೆ. ಇವುಗಳಲ್ಲಿ, 679 ಬ್ರಾಂಡ್‌ಗಳು ತಮ್ಮ ಔಷಧಗಳ ಬೆಲೆಯನ್ನು ಶೇಕಡಾ 50 ಕ್ಕಿಂತ ಹೆಚ್ಚು ಕಡಿಮೆ ಮಾಡಿವೆ. ದಾಖಲಾದ ಗರಿಷ್ಠ ಬೆಲೆ ಕಡಿತವು ಶೇಕಡಾ 96.45 ರಷ್ಟಿದೆ.

ಕ್ಯಾನ್ಸರ್‌ಗೆ ಬಳಸುವ ಹಲವಾರು ಪ್ರಮುಖ ಔಷಧಿಗಳ ಎಂಆರ್‌ಪಿಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ‘ಆರ್‌ಪಿಜಿ ಲೈಫ್ ಸೈನ್ಸಸ್’ ಸಂಸ್ಥೆಯ ‘ಪಾಲ್ಬೋಪ್ರೊ’ ಕ್ಯಾಪ್ಸುಲ್‌ಗಳ ಬೆಲೆಯನ್ನು 40,421.33 ರೂ.ನಿಂದ 2,720 ರೂ.ಗೆ ಇಳಿಸಲಾಗಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ‘ಆರ್ವಿನ್‌ಕೇರ್ ಫಾರ್ಮಾ’ ಸಂಸ್ಥೆಯ ‘ಅಬಿರಾನ್’ ಮಾತ್ರೆಗಳ ಬೆಲೆಯು 41,250 ರೂ.ನಿಂದ 3,218.23 ರೂ.ಗೆ ಇಳಿದಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!