Thursday, March 28, 2024
spot_imgspot_img
spot_imgspot_img

ಬಂಟ್ವಾಳ: ಶಾಸಕರ ಅಕ್ರಮಕ್ಕೆ ಬ್ರೇಕ್ ಹಾಕುತ್ತಿದ್ದ ಕಾರಣ ASP ಶಿವಾಂಶು ರಜಪೂತ್ ವರ್ಗಾವಣೆ – ರಮಾನಾಥ ರೈ

- Advertisement -G L Acharya panikkar
- Advertisement -

ಬಂಟ್ವಾಳ: ಬಂಟ್ವಾಳ ಹಾಗೂ ಬೆಳ್ತಂಗಡಿ ಶಾಸಕರ ಬೆಂಬಲದಿಂದ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ, ಮರಳು ದಂಧೆ, ಜುಗಾರಿ ದಂಧೆಗಳಿಗೆ ಕಡಿವಾಣ ಹಾಕುತ್ತಿದ್ದ ಎಎಸ್ಪಿ ಶಿವಾಂಶು ರಜಪೂತ್ ಅವರನ್ನು ರಾಜಕೀಯ ಒತ್ತಡದಿಂದ ವರ್ಗಾವಣೆ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಎಎಸ್ಪಿ ಶಿವಾಂಶು ರಜಪೂತ್

ಬಿ.ಸಿ.ರೋಡ್ ನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ರಾಜಕೀಯ ಪ್ರೇರಿತ ವರ್ಗಾವಣೆಯಾಗಿದ್ದು, ಒಳ್ಳೆಯ ಕೆಲಸ ಮಾಡುತ್ತಿದ್ದ ಅಧಿಕಾರಿಯನ್ನು ಹಠಾತ್ತಾಗಿ ವರ್ಗಾವಣೆ ಮಾಡಿದ್ದಾರೆ, ನಿರಂತರವಾಗಿ ಅಕ್ರಮ ಮರಳುಗಾರಿಕೆ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಅನಂತಾಡಿಯಲ್ಲಿ ಗಣಿಗಾರಿಕೆಯಿಂದ ಗುಹಾತೀರ್ಥಕ್ಕೆ ತೊಂದರೆ ಆಗುತ್ತಿದೆ ಎಂಬ ಆರೋಪಿಸಿ ಪ್ರತಿಭಟನೆಯನ್ನು ಮಾಡಿದ್ದೆವು ಎಂದು ನೆನಪಿಸಿದ ಅವರು, ಬಿಜೆಪಿಯವರು ಬೇರೆಯವರಿಗೆ ಬುದ್ಧಿವಾದ ಹೇಳುತ್ತಾರೆ, ಆದರೆ ಅವರಿಗೆ ಬುದ್ಧಿ ಹೇಳಬೇಕಾದವರು ಜನರು ಎಂದರು. ಒಂದು ಲೋಡ್ ಮರಳಿಗೆ 15 ಸಾವಿರ ರೂ ಕೊಡಬೇಕಾದ ಪರಿಸ್ಥಿತಿ ಇದೆ, ಮನೆ ಕಟ್ಟುವವರು ಸಂಕಷ್ಟ ಪಡುತ್ತಿದ್ದಾರೆ. ತಾಲೂಕಿನ ಒಂದು ಕಡೆ ಪರವಾನಗಿ ತೆಗೆದುಕೊಂಡವರು ಎಲ್ಲ ಕಡೆಗಳಲ್ಲೂ ಮರಳುಗಾರಿಕೆ ಮಾಡುತ್ತಾರೆ ಎಂದು ರೈ ಆರೋಪಿಸಿದರು.

ಬಿ.ರಮಾನಾಥ ರೈ

ಜೂಜು ಅಡ್ಡೆಯ ಬಳಿಯೇ ಕೊಲೆ ಯತ್ನ ಪ್ರಕರಣ, ಹಲ್ಲೆಗಳು ನಡೆದದ್ದು ವರದಿಯಾಗಿವೆ. ಹೆಣ್ಣುಮಕ್ಕಳ ಕರಿಮಣಿ ಅಡವಿಟ್ಟು ಜುಗಾರಿ ದಂಧೆಯಲ್ಲಿ ತೊಡಗಿಸಿಕೊಂಡವರಿದ್ದಾರೆ. ಮರಳುಗಾರಿಕೆಯ ಪಕ್ಕದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ, ಈ ಭಾಗದ ಬೆಳ್ತಂಗಡಿ ಮತ್ತು ಬಂಟ್ವಾಳದ ಇಬ್ಬರೂ ಶಾಸಕರ ಬೆಂಬಲ ಇದೆ ಎಂದು ನಾನು ನೇರವಾಗಿ ಆರೋಪಿಸುತ್ತೇನೆ ಎಂದು ರೈ ಹೇಳಿದರು.

ಬಂಟ್ವಾಳ ASPಯಾಗಿದ್ದ IPS ಅಧಿಕಾರಿ ಶಿವಶೂಂ ರಜಪೂತ್ ವರ್ಗಾವಣೆ

ಬಂಟ್ವಾಳ: ನೂತನ DYSP ಆಗಿ ಪ್ರತಾಪ್ ಸಿಂಗ್ ತೋರಾಟ್ ನೇಮಕ

- Advertisement -

Related news

error: Content is protected !!