Friday, June 12, 2026
spot_imgspot_img
spot_imgspot_img

ಬಂಟ್ವಾಳ: ಸಂಬಂಧಿಕನಿಂದಲೇ ಯುವತಿಗೆ ನಿರಂತರ ಲೈಂಗಿಕ ಕಿರುಕುಳ

- Advertisement -
- Advertisement -

ಬಂಟ್ವಾಳ: ಕಾಮುಕ ಸಂಬಂದಿಕನೋರ್ವ ಯುವತಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಂಟ್ವಾಳದ ಸರಪಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಂಚಾಯತ್ ಕಾವಲು ಸಮಿತಿ ಹಾಗೂ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯವರ ಸಕಾಲಿಕ ಮಧ್ಯಪ್ರವೇಶದಿಂದ ಸಂತ್ರಸ್ತ ಯುವತಿಯನ್ನು ರಕ್ಷಿಸಿ ಪುನರ್‌ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.

ಆರೋಪಿಯ ಮನೆಯಲ್ಲಿ ಯುವತಿ ಹಾಗೂ ಆಕೆಯ ತಮ್ಮ ವಾಸವಾಗಿದ್ದು, ಪ್ರಸ್ತುತ ತಮ್ಮನನ್ನೂ ಕೂಡ ಆ ಮನೆಯಿಂದ ಬಿಡುಗಡೆಗೊಳಿಸಲಾಗಿದೆ. ಯುವತಿಯನ್ನು ಜಪ್ಪಿನಮೊಗರಿನ ಸ್ವಾಧಾರ ಕೇಂದ್ರ ಹಾಗೂ ಬಾಲಕನನ್ನು ಬೋಂದೆಲ್‌ನ ಬಾಲಮಂದಿರಕ್ಕೆ ಸೇರಿಸಲಾಗಿದೆ.

ಅವರಿಬ್ಬರು ಅಜ್ಜಿಯ ಜತೆ ವಾಸವಾಗಿದ್ದು, ಅಜ್ಜಿಯ ನಿಧನರಾದ ಬಳಿಕ ಸಂಬಂಧಿಕನ ಈತನ ಮನೆಗೆ ಬಂದಿದ್ದರು. ಆಕೆಯ ಆರೋಗ್ಯದಲ್ಲಿ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಲೈಂಗಿಕ ಕಿರುಕುಳವನ್ನು ಹೇಳುವ ಸ್ಥಿತಿಯಲ್ಲಿರಲಿಲ್ಲ ಎನ್ನಲಾಗಿದೆ. ಈ ಕುರಿತು ಮಾಹಿತಿ ಪಡೆದ ಸರಪಾಡಿ ಪಂಚಾಯತ್ ಕಾವಲು ಸಮಿತಿಯವರು ಸಂಬಂಧಪಟ್ಟ ಇಲಾಖೆಗೆ ತಿಳಿಸಿ, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ಅವರ ಮಾರ್ಗದರ್ಶನದಲ್ಲಿ ರಕ್ಷಣಾ ಕಾರ್ಯ ನಡೆದಿದೆ. ಮೇಲ್ವಿಚಾರಕಿ ಶೋಭಾ ಅವರು ಈ ಕಾರ್ಯ ನಿರ್ವಹಿಸಿದ್ದಾರೆ.

- Advertisement -

Related news

error: Content is protected !!