Wednesday, July 2, 2025
spot_imgspot_img
spot_imgspot_img

ಬಕ್ರೀದ್ ಹಿನ್ನಲೆ ಕೇರಳದಲ್ಲಿ ಜು.18 ರಿಂದ 20ರವರೆಗೆ ಲಾಕ್‌ಡೌನ್ ನಿರ್ಬಂಧ ಸಡಿಲಿಕೆ

- Advertisement -
- Advertisement -

ಕಾಸರಗೋಡು: ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಕೇರಳದಲ್ಲಿ ಜುಲೈ 18 ರಿಂದ 20ರವರೆಗೆ ಲಾಕ್‌ಡೌನ್ ನಿರ್ಬಂಧದಲ್ಲಿ ಸಡಿಲಿಕೆ ಮಾಡಿ ಸರಕಾರ ಆದೇಶಿಸಿದೆ.

ಟ್ರಿಪಲ್ ಲಾಕ್‌ಡೌನ್ ಹೊಂದಿರುವ ಪ್ರದೇಶ ಹೊರತು ಪಡಿಸಿ ಜುಲೈ 18 ರಿಂದ 20ರ ತನಕ ಅಗತ್ಯ ವಸ್ತುಗಳು ಮಾರಾಟ ಮಾಡುವ ದಿನಸಿ, ಬಾಳೆಹಣ್ಣು, ತರಕಾರಿ, ಮೀನು, ಮಾಂಸ, ಬೇಕರಿ ಅಲ್ಲದೆ ವಸ್ತ್ರ ಮಳಿಗೆ, ಚಪ್ಪಲಿ, ಇಲೆಕ್ಟ್ರಾನಿಕ್ಸ್, ಫ್ಯಾನ್ಸಿ ಮಳಿಗೆಗಳು, ಚಿನ್ನಾಭರಣ ಮಳಿಗೆಗಳನ್ನೂ ತೆರೆಯಲು ಅವಕಾಶ ನೀಡಲಾಗಿದೆ.

ಬೆಳಿಗ್ಗೆ 7 ರಿಂದ ರಾತ್ರಿ ಎಂಟು ಗಂಟೆ ತನಕ ಮಳಿಗೆಗಳನ್ನು ತೆರೆಯಬಹುದಾಗಿದ್ದು, ಜುಲೈ 21 ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ.

- Advertisement -

Related news

error: Content is protected !!