
ಬಜಪೆ: ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ದಡ್ಡಿ ಕ್ರಾಸ್ ಬಳಿ ಪಿಕ್ ಅಪ್ ವಾಹನದಲ್ಲಿ ದನಗಳನ್ನು ಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಬಗ್ಗೆ ಬಾತ್ಮೀದಾರದಿಂದ ಬಂದ ಖಚಿತ ಮಾಹಿತಿಯಂತೆ ಬಜಪೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಜಾನುವಾರು ಸಾಗಾಟ ಮಾಡುತ್ತಿದ್ದ ಪುತ್ತಿಗೆ ಹಂಡೇಲು ಜರೀನಾ ಮಂಜಿಲ್‌ನ ಅಬ್ದುಲ್ ಫಾರೂಕ್ (41), ಬಡಗ ಮಿಜಾರಿನ ಅಬೂಬಕ್ಕರ್ (45), ತೋಡಾರು ದರ್ಖಾಸ್ ಹೌಸ್ ಶಿವ(60) 3 ಮಂದಿ ಆರೋಪಿಗಳನ್ನು ಜ.22ರಂದು ಬಂಧಿಸಿದ್ದಾರೆ.

ಪಿಕ್ ಅಪ್ ವಾಹನ ಮತ್ತು 4 ದನಗಳ ಸಹಿತ ಒಟ್ಟು 4ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರ ಮಾರ್ಗದರ್ಶನದಂತೆ ಡಿಸಿಪಿಯವರಾದ ಹರಿರಾಮ್ ಶಂಕರ್ (ಕಾ ಮತ್ತು ಸು) ಮತ್ತು ದಿನೇಶ್ ಕುಮಾರ್ (ಅ ಮತ್ತು ಸಂ.) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್.ಮಹೇಶ್ ಕುಮಾರ್‌ರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬಜಪೆ ಪೊಲೀಸ್ ಠಾಣಾ ಪಿಎಸ್‌ಐ ಗಳಾದ ಪೂವಪ್ಪಗುರುವಪ್ಪ ಶಾಂತಿ,ಕಮಲ,ಎ.ಎಸ್.ಐ ರಾಮ ಪೂಜಾರಿ ಮೇರಮಜಲು, ಹೆಚ್‌ಸಿ ಸಂತೋಷ ಡಿ.ಕೆ.ಸುಳ್ಯ, ಸಿಬಂದಿಗಳಾದ ರಶೀದ್ ಶೇಖ್,ವಿನೋದ್,ಸಂಜೀವ ಭಜಂತ್ರಿ ಭಾಗವಹಿಸಿರುತ್ತಾರೆ.
