Thursday, June 18, 2026
spot_imgspot_img
spot_imgspot_img

ಮಂಗಳೂರು: ಅನ್ಯಕೋಮಿನ ಜೋಡಿಯ ಮೇಲೆ ಹಲ್ಲೆ ಪ್ರಕರಣ; ನಾಲ್ವರು ಅರೆಸ್ಟ್

- Advertisement -
- Advertisement -

ಮಂಗಳೂರು: ಕದ್ರಿ ಉದ್ಯಾನವನದ ಬಳಿ ಅನ್ಯಕೋಮಿನ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಕಡಬದ ಯಶ್ವಿ‌ತ್‌, ಚಿಕ್ಕಮಗಳೂರಿನ ಶರತ್‌, ಅಳಪೆಯ ಧೀರಜ್‌, ಬಂಟ್ವಾಳದ ಅಭಿಜಿತ್‌ ಬಂಧಿತ ಆರೋಪಿಗಳು.

ಅವರು ಹಿಂದೂ ಸಂಘಟನೆಯ ಕಾರ್ಯಕರ್ತರು ಎಂದು ಹೇಳಲಾಗಿದೆ. ಆರೋಪಿಗಳು ಬುಧವಾರ ಉತ್ತರ ಕರ್ನಾಟಕ ಮೂಲದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ

- Advertisement -

Related news

error: Content is protected !!