Friday, May 3, 2024
spot_imgspot_img
spot_imgspot_img

ಬದಿಯಡ್ಕದ ವೈದ್ಯ ಡಾ.ಕೃಷ್ಣಮೂರ್ತಿ ಸಂಶಯಾಸ್ಪದ ಸಾವು ಪ್ರಕರಣ; ಸಿಸಿಟಿವಿ ಪರಿಶೀಲನೆ, ಆತ್ಮಹತ್ಯೆ ಎಂದೇ ಪೊಲೀಸರ ಪರಿಗಣನೆ

- Advertisement -G L Acharya panikkar
- Advertisement -
vtv vitla

ಉಡುಪಿ: ಬದಿಯಡ್ಕದ ವೈದ್ಯ ಡಾ.ಕೃಷ್ಣಮೂರ್ತಿ ಶವ ರೈಲು ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸರು ತನಿಖೆ ಪೂರ್ತಿಗೊಳಿಸಿದ್ದಾರೆ. ತನಿಖೆಯಲ್ಲಿ ವೈದ್ಯರದ್ದು ಬಹುತೇಕ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.

ನ. 8ರಂದು ಕೃಷ್ಣಮೂರ್ತಿ, ಕಾಸರಗೋಡಿನಿಂದ ಮಂಗಳೂರಿಗೆ ಬಂದು ಅಲ್ಲಿಂದ ಉಡುಪಿ, ಕುಂದಾಪುರಕ್ಕೆ ಬಸ್ ನಲ್ಲಿ ತೆರಳಿರುವುದು ವಿವಿಧ ಕಡೆಯ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗ ಕಂಡುಬಂದಿದೆ. ಮಂಗಳೂರಿನಿಂದ ಕುಂದಾಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಆಗಮಿಸಿದ್ದು , ಮಧ್ಯಾಹ್ನ 12. 30ಕ್ಕೆ ಕುಂದಾಪುರ ಶಾಸ್ತ್ರಿ ಸರ್ಕಲ್ ನಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅನಂತರ ದ್ವಾರಕಾ ಹೊಟೇಲ್‌ ಗೆ ತೆರಳಿರುವುದು ಕಂಡುಬಂದಿದೆ.

ವೈದ್ಯರು ಒಬ್ಬಂಟಿಯಾಗಿಯೇ ನಡೆದುಕೊಂಡು ಹೋಗುವುದು, ಮಂಗಳೂರಿನ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುವುದು ಕಂಡುಬಂದಿದೆ. ಒಂದು ಬ್ಯಾಗ್ ಹಾಕಿಕೊಂಡು ಒಬ್ಬಂಟಿಯಾಗಿ ತೆರಳುತ್ತಿದ್ದರು. ಈ ನಡುವೆ, ಬದಿಯಡ್ಕದಿಂದ ಹೊರಡುವಾಗ ಇದ್ದ ಅಂಗಿಯ ಬದಲು ಶವದಲ್ಲಿ ಬೇರೆ ಅಂಗಿ ಇದ್ದುದರಿಂದ ಸಂಶಯ ವ್ಯಕ್ತವಾಗಿತ್ತು. ನಡುವೆ ಶರ್ಟ್ ಬದಲಾವಣೆ ಮಾಡಿದ್ದರೇ ಎನ್ನುವ ಬಗ್ಗೆ ಪೊಲೀಸರು ಸಿಸಿಟಿವಿಗಳನ್ನು ಗಮನಿಸುತ್ತಿದ್ದಾರೆ. ಆದರೆ ಜೊತೆಗಿದ್ದ ಬ್ಯಾಗ್‌ ಪೊಲೀಸರಿಗೆ ಲಭಿಸಿಲ್ಲ. ಅಲ್ಲದೆ, ಅವರು ಧರಿಸಿದ್ದ ಬೆಲ್ಟ್ ಮತ್ತು ವಾಚ್ ಪ್ರತ್ಯೇಕವಾಗಿ ಸಿಕ್ಕಿದ್ದು ವೈದ್ಯರೇ ಅದನ್ನು ಬೇರೆ ಬೇರೆ ಕಡೆ ಹಾಕಿದ್ದರೇ ಎಂಬ ಶಂಕೆಯಿದೆ. ಅಲ್ಲದೆ, ವೈದ್ಯರು ಬದಿಯಡ್ಕದಲ್ಲಿ ಹಾಕ್ಕೊಂಡು ಹೋಗಿದ್ದ ಶರ್ಟ್ ಎಲ್ಲಿಟ್ಟಿದ್ದಾರೆ ಎಂಬ ಬಗ್ಗೆಯೂ ಸರಿಯಾದ ಮಾಹಿತಿ ದೊರತಿಲ್ಲ.

ಕೃಷ್ಣಮೂರ್ತಿಯವರು ಕುಂದಾಪುರದ ಶಾಸ್ತ್ರಿ ಸರ್ಕಲ್ ನಿಂದ ರೈಲ್ವೇ ಸ್ಟೇಶನ್ ಬಳಿಗೆ ತೆರಳುವ ಹಾದಿಯಲ್ಲಿ ಇಬ್ಬರನ್ನು ಮಾತನಾಡಿಸಿದ್ದು ಏನೋ ಮಾಹಿತಿ ಕೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಶವ ದೊರೆತ ಬಳಿಕ ಮಣಿಪಾಲದಲ್ಲಿ ಪೋಸ್ಟ್ ಮಾರ್ಟಂ ನಡೆಸಿದ್ದು ಅದರ ವರದಿ ಇನ್ನೂ ಬಂದಿಲ್ಲ. ಘಟನೆ ಬಗ್ಗೆ ಫಾರೆನ್ಸಿಕ್ ವರದಿ ಬಂದ ಬಳಿಕ ಅದನ್ನು ತಾಳೆಹಾಕಿ ಪೊಲೀಸರು ನಿರ್ಧಾರಕ್ಕೆ ಬರಲಿದ್ದಾರೆ. ಆಸ್ತಿ ವಿಚಾರದಲ್ಲಿ ವಿವಾದ ಮತ್ತು ಮಹಿಳೆಯನ್ನು ಮುಂದಿಟ್ಟು ಟ್ಯಾಪ್ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದು, ಐದು ಮಂದಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!