Thursday, May 16, 2024
spot_imgspot_img
spot_imgspot_img

ಧ್ಯಾನದಿಂದ ನಿಮ್ಮ ಬೆಳಗಿನ ದಿನಚರಿಯನ್ನು ಪ್ರಾರಂಭಿಸಿ

- Advertisement -G L Acharya panikkar
- Advertisement -

ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ವ್ಯಾಯಾಮ ಶಾಲೆಯಲ್ಲಿ ಕಸರತ್ತು ಮಾಡಿ, ’ಟ್ರೆಡ್ ಮಿಲ್’ ನಲ್ಲಿ ನಡೆದಾಡಿ,ಭಾರ ಎತ್ತುವುದು ಬಹಳ ಜನರ ಬೆಳಗಿನ ದಿನಚರಿ, ಅದರಿಂದ ಜನರಿಗೆ ಸಂತೋಷ ಸಿಗುತ್ತದೆ. ಅದೇ ರೀತಿ ಇಡೀ ದಿನ ಸಂತೋಷವಾಗಿರಲು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಧ್ಯಾನ ಮಾಡಿದರೆ ಸಾಧ್ಯ ಎಂದರೆ ನಂಬುತೀರಾ?”ಧ್ಯಾನ” ಎಂದರೆ ತನ್ನೊಳಗೆ ಆಳವಾಗಿ ಸಂಚರಿಸುವುದು.”ಧ್ಯಾನ” ಸದಾಕಾಲ ನಮ್ಮನ್ನು ಸಂತೋಷವಾಗಿರಿಸುವ ಸಾಧನ.ಆದುದರಿಂದ ನಮ್ಮ ಬೆಳಗಿನ ದಿನಚರಿಗೆ ಧ್ಯಾನವನ್ನು ಸೇರಿಸುವುದರಿಂದ, ನಮ್ಮ ಸಂತೋಷವು ವರ್ಧಿಸಿ, ಇಡೀ ದಿನ ನಗುತ್ತಿರುವಂತೆ ಆಗುತ್ತದೆ ನಮ್ಮ ಜೀವನ ಶೈಲಿ.

ಇಡೀ ದಿನ ಬಹಳಷ್ಟು ಕೆಲಸಗಳು, ವಿಚಾರಗಳು ಇರುವುದರಿಂದ ಬೆಳಿಗ್ಗೆ ಎದ್ದು ಧ್ಯಾನ ಮಾಡುವುದು ಬಹಳ ಉಪಯೋಗಕಾರಿ.
ಬೆಳಿಗ್ಗೆ ಎದ್ದು ಧ್ಯಾನ ಮಾಡಲು ಸಹಾಯಕವಾಗಿರುವ ಸಲಹೆಗಳು

ಖಾಲಿ ಹೊಟ್ಟೆಯಲ್ಲಿ ಧ್ಯಾನ ಮಾಡುವುದು ಉತ್ತಮ ಅದನ್ನು ರೂಢಿಸಿಕೊಳ್ಳಿ. ಧ್ಯಾನಕ್ಕೆ ಮೊದಲು ಯೋಗದ ಭಂಗಿಗಳನ್ನು ಮಾಡಿ ವಿಶ್ರಾಂತಿ ಪಡೆದುಕೊಳ್ಳಿ.ಬೆಳಗ್ಗಿನ ನಡೆದಾಡುವಿಕೆ, ವ್ಯಾಯಾಮ, ಯೋಗ, ಇವುಗಳು ನಮ್ಮ ಸ್ನಾಯುಗಳನ್ನು ಸಡಿಲಿಸುತ್ತದೆ.
ದೇಹದ ವ್ಯಾಯಾಮ ಮಾಡಿ , ನಿಮಗೆ ಬೆಳಗ್ಗೆ ಎದ್ದು “ಜಾಗಿಂಗ್” ಮಾಡುವುದು ಅಥವಾ ವ್ಯಾಯಾಮ ಮಾಡುವುದು ಉತ್ಸಾಹ ತರುತ್ತಿದ್ದರೆ,ಅದನ್ನು ಮಾಡಿ ನಂತರ ಧ್ಯಾನಕ್ಕೆ ಕುಳಿತುಕೊಳ್ಳಿ. ಧ್ಯಾನವು ನಿಮ್ಮ ದೇಹವನ್ನು ತಂಪು ಮಾಡಿ, ವಿಶ್ರಾಂತಿ ಕೊಡುತ್ತದೆ ಹಾಗು ಅದರ ಜೊತೆಗೆ ಮನಸ್ಸನ್ನು ಉಲ್ಲಾಸದಾಯಕವಾಗಿ ಇರಿಸುತ್ತದೆ.

ಧ್ಯಾನ ಮಾಡುವ ಸಲುವಾಗಿ ಒಂದು ಪ್ರತ್ಯೇಕ ಜಾಗವನ್ನು ಮಾಡಿಕೊಳ್ಳಿ ,ಧ್ಯಾನ ಮಾಡುವ ಸ್ಥಳವನ್ನು ನಿರ್ಧರಿಸಿ ಅಲ್ಲಿ ಒಳ್ಳೆಯ ಅಲಂಕಾರಿಕ ವಸ್ತುಗಳನ್ನು ನೇತುಹಾಕಿ. ನಿಮಗೆ ಇಷ್ಟವಿರುವ ಹೂವು ಮತ್ತು ಸುಗಂಧವಿರುವ ಸಸಿಗಳನ್ನು ಹತ್ತಿರದ ಮೇಜಿನ ಮೇಲೆ ತಂದಿರಿಸಿ. ಆ ಕೋಣೆಯನ್ನು ಶಾಂತ ಬಣ್ಣಗಳಾದ, ತಿಳಿಹಳದಿ, ತಿಳಿನೀಲಿ ಅಥವಾ ಹಸಿರು ಬಣ್ಣದಿಂದ ಅಲಂಕರಿಸಿ. ಸೋಫ ಅಥವಾ ಕುರ್ಚಿಯನ್ನು, ದಿಂಬು ಅಥವಾ ತೆಳು ಹೊದಿಕೆಯಿಂದ ಅಲಂಕರಿಸಿ.

ಬೆಳಗ್ಗಿನ ದಿನಚರಿಯನ್ನು ನಡೆದಾಡುವ ಅಭ್ಯಾಸದಿಂದ ಆರಂಭಿಸಿ.ಪ್ರಕೃತಿಯ ಜೊತೆ ಇರುವುದರಿಂದ ಅದು ನಮ್ಮನ್ನು ಜೀವನದ ಮೂಲ ಸ್ಥಿತಿಗೆ ಜೋಡಿಸುತ್ತದೆ.ಬೆಳಿಗ್ಗೆ ಎದ್ದು ಧ್ಯಾನಕ್ಕೂ ಮೊದಲು ನಡೆದಾಡುವುದರಿಂದ ತಾಜಾ ಹವಾ ನಮಗೆ ಉಸಿರಾಡಲು ಸಿಗುತ್ತದೆ ಹಾಗು ಗಿಡಗಳ ಮೇಲಿನ ತುಂತುರು ಹನಿಗಳನ್ನು ಅನುಭವಿಸುತ್ತಾ ಶಾಂತ ಮನಸ್ಥಿತಿಗೆ ಹೋಗುತ್ತೇವೆ.

- Advertisement -

Related news

error: Content is protected !!