Thursday, May 2, 2024
spot_imgspot_img
spot_imgspot_img

ಬದಿಯಡ್ಕ: ಪೌರೋಹಿತ್ಯ ವಲಯಕ್ಕೆ ಕಾಲಿಟ್ಟ ವಿದ್ಯಾರ್ಥಿನಿ..! ಅಸೀಮ ಅಗ್ನಿ ಹೋತ್ರಿಯಿಂದ ಗಣಹೋಮ

- Advertisement -G L Acharya panikkar
- Advertisement -

ಬದಿಯಡ್ಕ: ಪುರುಷರಿಗಷ್ಟೇ ಸೀಮಿತವಾಗಿದ್ದ, ಪೌರೋಹಿತ್ಯದ ನೇತೃತ್ವವನ್ನು ಹೆಣ್ಣು ಮಗಳೊಬ್ಬಳು ವಹಿಸಿಕೊಳ್ಳುವ ಮೂಲಕ ನೂತನ ಸಂಪ್ರದಾಯಕ್ಕೆ ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಸಾಕ್ಷಿಯಾಗಿದೆ.

ಅಡೂರಿನ ಅಸೀಮ ಅಗ್ನಿ ಹೋತ್ರಿ ಇವರು ಸತ್ಯನಾರಾಯಣ ಅಗ್ನಿ ಹೋತ್ರಿ ಮತ್ತು ರಂಜಿನಿ ಕುಮಾರಿ ದಂಪತಿಯ ಪುತ್ರಿ. ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ 9ನೇ ತರಗತಿಯ ತನ್ನ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಅಸೀಮ ಅಗ್ನಿ ಹೋತ್ರಿಯ ಗುರುಗಳಾದ ಸುಳ್ಯದ ನಾಗರಾಜ ಭಟ್‌ ಕೇಶವ ಕೃಪ ವೇದಪಾಠ ಶಾಲೆಯಲ್ಲಿ ಬೇಸಿಗೆ ರಜಾ ಶಿಬಿರದಲ್ಲಿ 3 ವರ್ಷಗಳ ಕಾಲ ವೇದಾಧ್ಯಯನ ಮಾಡಿ, ಇದೀಗ ಗಣಹೋಮದ ಪೌರೋಹಿತ್ಯವನ್ನು ನಿರ್ವಹಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಹಾಗೂ ಶಾಲೆಯ ಧ್ಯಾನಮರದಲ್ಲಿ ಗಣಹೋಮವನ್ನು ನಡೆಸಿ ಅಸೀಮ ಅಗ್ನಿ ಹೋತ್ರಿ ಎಲ್ಲರ ಗಮನಸೆಳೆದಿದ್ದಾರೆ.

- Advertisement -

Related news

error: Content is protected !!