Friday, May 3, 2024
spot_imgspot_img
spot_imgspot_img

ಬದಿಯಡ್ಕ: ಭಾರೀ ಪ್ರಮಾಣದ ನಿಷೇಧಿತ ನಕಲಿ ನೋಟುಗಳು ಪೊಲೀಸರ ವಶ..! ಕರ್ನಾಟಕಕ್ಕೆ ಕಳ್ಳಸಾಗಾಣಿಕೆ ಮಾಡಲು ದಾಸ್ತಾನು ಇರಿಸಿದ್ದಾಗಿ ಶಂಕೆ

- Advertisement -G L Acharya panikkar
- Advertisement -

ಬದಿಯಡ್ಕ: ಯಾರೂ ಇಲ್ಲದ ಮನೆಯಲ್ಲಿ ಭಾರೀ ಪ್ರಮಾಣದ ನಿಷೇಧಿತ 1000 ರೂ.ನ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ. ಬದಿಯಡ್ಕ ಸಮೀಪದ ಶಾಫಿ ಎಂಬುವವರ ವಾಸವಿಲ್ಲದ ಮನೆಯಲ್ಲಿ ಈ ನಕಲಿ ನೋಟುಗಳ ಸಂಗ್ರಹ ಪತ್ತೆಯಾಗಿದೆ ಎನ್ನಲಾಗಿದೆ. ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ರಹಸ್ಯ ಮಾಹಿತಿ ಮೇರೆಗೆ ಬದಿಯಡ್ಕ ಪೊಲೀಸರ ತಂಡ ದಾಳಿ ನಡೆಸಿದೆ.

ಈ ಮನೆಯನ್ನು ವ್ಯಕ್ತಿಯೊಬ್ಬರು ಬಾಡಿಗೆಗೆ ಪಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕರ್ನಾಟಕಕ್ಕೆ ಕಳ್ಳಸಾಗಾಣಿಕೆ ಮಾಡಲು ತಾತ್ಕಾಲಿಕವಾಗಿ ಇಲ್ಲಿಗೆ ಕರೆತಂದಿರಬಹುದು ಅಥವಾ ಬೇರೆ ಬೇರೆ ರೀತಿಯಲ್ಲಿ ಸಾಗಾಟ ಮಾಡಿರಬಹುದು ಎಂಬ ಶಂಕೆಯೂ ಸ್ಥಳೀಯರಿಂದ ವ್ಯಕ್ತವಾಗಿದೆ.

ಇದರ ಹಿಂದಿನ ಕಾರಣ ಅಸ್ಪಷ್ಟವಾಗಿದೆ. ವಶಪಡಿಸಿಕೊಂಡ ನೋಟುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.

- Advertisement -

Related news

error: Content is protected !!