Saturday, May 18, 2024
spot_imgspot_img
spot_imgspot_img

ಬಲೆಗೆ ಬಿತ್ತು ಬರೋಬ್ಬರಿ 1 ಕೋಟಿ ಮೌಲ್ಯದ 22 ಟೆಲಿಯಾ ಭೋಲಾ ಮೀನುಗಳು..! ಏನಿದರ ವಿಶೇಷತೆ..?

- Advertisement -G L Acharya panikkar
- Advertisement -

ಮೀನುಗಾರರಿಗೆ ಬಂಪರ್ ಹೊಡೆದಿದೆ. ಸಿಕ್ಕಿದ್ದು ಕೇವಲ ೨೨ ಮೀನುಗಳು. ಆದರೆ ಅದರ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದು ಖಂಡಿತಾ. ಪಶ್ಚಿಮ ಬಂಗಾಳದ ಪ್ರಸಿದ್ಧ ದಿಘಾ ಮೀನು ಮಾರುಕಟ್ಟೆಯಲ್ಲಿ ಸುಮಾರು 1 ಕೋಟಿ ಮೌಲ್ಯದ 22 ತೇಲಿಯಾ ಭೋಲಾ ಮೀನುಗಳು ಸಿಕ್ಕಿವೆ. ಪೂರ್ವ ಭಾರತದ ಅತಿದೊಡ್ಡ ಮೀನು ಹರಾಜು ಕೇಂದ್ರವಾದ ದಿಘಾ ನದೀಮುಖದಲ್ಲಿ ಮೀನುಗಾರರು 22 ತೇಲಿಯಾ ಭೋಲಾ ಮೀನುಗಳನ್ನು ಬಲೆಗೆ ಬೀಳಿಸಿದ್ದಾರೆ.

ಭುವನ್ ಬೇರಾದಿಂದ ಟ್ರಾಲರ್ ಶನಿವಾರ 22 ಟೆಲಿಯಾ ಭೋಲಾ ಮೀನುಗಳನ್ನು ತಂದಿತ್ತು. ಈ ಪ್ರತಿಯೊಂದು ಮೀನಿನ ತೂಕವು 20-22 ಕೆ.ಜಿ. ತೂಗುತ್ತದೆ. ಕೋಲ್ಕತ್ತಾದ ಕಂಪನಿಯೊಂದರಲ್ಲಿ ಪ್ರತಿ ಕೆಜಿಗೆ 14,800 ರೂ. ದರದಲ್ಲಿ ಮೀನನ್ನು ಹರಾಜು ಮಾಡಲಾಗಿದೆ.

ಈ ದೊಡ್ಡ ಮೀನುಗಳನ್ನು ನೋಡಲು ಪ್ರವಾಸಿಗರು ಮತ್ತು ಮೀನು ವ್ಯಾಪಾರಿಗಳು ಮುಗಿಬಿದ್ದಿದ್ದರು. ಈ ಮೀನುಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ತೇಲಿಯಾ ಭೋಲಾ ಮೀನು ತುಂಬಾ ದುಬಾರಿಯಾಗಿದ್ದು, ಅದರಿಂದ ಜೀವರಕ್ಷಕ ಔಷಧಗಳನ್ನು ತಯಾರಿಸಲಾಗುತ್ತದೆ.

astr
- Advertisement -

Related news

error: Content is protected !!