Sunday, April 28, 2024
spot_imgspot_img
spot_imgspot_img

ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ – 6 ಮಂದಿ ಬಲಿ

- Advertisement -G L Acharya panikkar
- Advertisement -

ಬಹು ಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ ನಾಲ್ವರು ಯುವತಿಯರು ಸೇರಿದಂತೆ 6 ಮಂದಿ ಮೃತಪಟ್ಟ ಘಟನೆ ತೆಲಂಗಾಣದ ಸಿಕಂದರಾಬಾದ್ ನಲ್ಲಿ ನಡೆದಿದೆ. ತೆಲಂಗಾಣದ ವಾರಂಗಲ್ ಹಾಗೂ ಕಮ್ಮಂ ಜಿಲ್ಲೆಗೆ ಸೇರಿದ ನಿವಾಸಿ ಪ್ರಮೀಳಾ, ವೆನ್ನೆಲಾ, ಶ್ರಾವಣಿ, ಪ್ರಶಾಂತ್, ತ್ರಿವೇಣಿ, ಶಿವ ಸಾವನ್ನಪ್ಪಿದ ದುರ್ದೈವಿಗಳು. ಮೃತ ಪಟ್ಟವರು ಮಾರ್ಕೆಟಿಂಗ್ ಕಂಪೆನಿಯೊಂದರ ಉದ್ಯೋಗಿಗಳಾಗಿದ್ದಾರೆ

ಸಿಕಂದರಾಬಾದ್ ಸ್ವಪ್ನಲುಕ್ ಕಟ್ಟಡದ 5 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಂಜೆ ವೇಳೆಗೆ ಕ್ರಮೇಣ 6 ಮತ್ತು 7 ನೇ ಮಳಿಗೆಗಳಿಗೂ ಬೆಂಕಿ ಆವರಿಸಿದೆ. ಹೊಗೆ ಮತ್ತು ಬೆಂಕಿಯಿಂದಾಗಿ ಹೊರ ಬರಲಾಗದೆ 13 ಮಂದಿ ಸಿಲುಕಿಕೊಂಡಿದ್ದು , 7 ಮಂದಿಯನ್ನು ರಕ್ಷಿಸಲಾಯಿತು. ಆದರೆ ಉಳಿದ 6ಮಂದಿ ಹೊಗೆಯಿಂದ ಉಸಿರುಗಟ್ಟಿ ಮೃತ ಪಟ್ಟಿದ್ದಾರೆ.

ಕಟ್ಟಡದಲ್ಲಿ ಬೇರೆ ಬೇರೆ ಕಂಪೆನಿಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ವಿದ್ಯುತ್ ಶಾರ್ಟ್ ಸಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣವಾಗಿದ್ದು, 10 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ.

- Advertisement -

Related news

error: Content is protected !!