Saturday, June 28, 2025
spot_imgspot_img
spot_imgspot_img

ಬಾಡಿಗೆ ಮನೆ ಪಡೆಯಲು ಕ್ಲಿಯರೆನ್ಸ್‌ ಪ್ರಮಾಣಪತ್ರ ಅಗತ್ಯ; ಪೊಲೀಸ್‌ ಕಮೀಷನರ್‌ ಹೊಸ ಸುತ್ತೋಲೆ

- Advertisement -
- Advertisement -

ಮೈಸೂರು: ಮೈಸೂರು ಪೊಲೀಸರು ಹೊಸ ಬಾಡಿಗೆ ನೀತಿಯನ್ನು ತಂದಿದ್ದು, ಮನೆ ಬಾಡಿಗೆಗೆ ಪೊಲೀಸ್‌ರಿಂದ ಕ್ಲಿಯರೆನ್ಸ್‌ ಪ್ರಮಾಣಪತ್ರದ ಅಗತ್ಯವಿದೆ.

ನಕಲಿ ದಾಖಲೆಗಳ ನೆರವಿನಿಂದ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದಿದ್ದ ಮಂಗಳೂರು ಸ್ಫೋಟ ಪ್ರಕರಣದ ಶಂಕಿತ ಉಗ್ರ ಶಾರಿಕ್ ಬಳಸಿದಂತೆಯೇ ಭಯೋತ್ಪಾದನಾ ಉದ್ದೇಶಕ್ಕೆ ಮನೆ ಬಳಕೆಯಾಗುವುದನ್ನು ತಪ್ಪಿಸಲು ಈ ಹೊಸ ನೀತಿಯನ್ನು ರೂಪಿಸಲಾಗಿದೆ.

ಮೈಸೂರಿನಲ್ಲಿ ಇನ್ಮುಂದೆ ಬಾಡಿಗೆ ಮನೆ ಪಡೆಯಲು ಕಡ್ಡಾಯವಾಗಿ ನಿರಾಕ್ಷೇಪಣಾ ಪ್ರಮಾಣಪತ್ರ ಅಂದರೆ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಪಡೆಯಬೇಕೆಂದು ಮೈಸೂರು ನಗರ ಪೊಲೀಸ್‌ ಕಮೀಷನರ್‌ ರಮೇಶ್‌ ಹೊಸ ಸುತ್ತೋಲೆ ಹೊರಡಿಸಿದ್ದಾರೆ.

ಮೈಸೂರು ಪೊಲೀಸರು ಸಿದ್ಧಪಡಿಸಿರುವ ಹೊಸ ಬಾಡಿಗೆ ನೀತಿಯ ಪ್ರಕಾರ, ಯಾವುದೇ ವ್ಯಕ್ತಿಗೆ ಬಾಡಿಗೆಗೆ ಮನೆ ನೀಡುವ ಮೊದಲು ಮಾಲೀಕರು ಹತ್ತಿರದ ಪೊಲೀಸ್ ಠಾಣೆಯಿಂದ ಕ್ಲಿಯರೆನ್ಸ್‌ ಪ್ರಮಾಣಪತ್ರವನ್ನು ಹೊಂದಿರಬೇಕು ಎನ್ನಲಾಗಿದೆ.

100 ರೂ. ಅರ್ಜಿ ಶುಲ್ಕದೊಂದಿಗೆ ಪೊಲೀಸ್ ಠಾಣೆಯಲ್ಲಿ ಕ್ಲಿಯರೆನ್ಸ್ ಪ್ರಮಾಣ ಪತ್ರವನ್ನು ಪಡೆಯಬೇಕು. ಪೊಲೀಸ್ ಆಯುಕ್ತರು ಎಲ್ಲಾ ಮಾಲೀಕ‌ ತಮ್ಮ ಬಾಡಿಗೆದಾರರ ಬಗ್ಗೆ ಠಾಣೆಯಲ್ಲಿ ಮಾಹಿತಿ ನೀಡುವಂತೆ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿ ನೋಟಿಸ್‌ ಜಾರಿ ಮಾಡಿದ್ದಾರೆ.

- Advertisement -

Related news

error: Content is protected !!