Friday, June 5, 2026
spot_imgspot_img
spot_imgspot_img

ಬಾಲಕಿಯರ ಹಾಸ್ಟೆಲ್‌ಗೆ ಬಂದು ಎಸ್ಕೇಪ್‌ ಆಗುವ ಭರದಲ್ಲಿ ಬಾವಿಗೆ ಬಿದ್ದ ಯುವಕ..! ಬಂದಿದ್ದೇಕೆ ಗೊತ್ತಾ?

- Advertisement -
- Advertisement -

ಬಾಲಕಿಯರ ಹಾಸ್ಟೆಲ್ ನಿಂದ ಮೊಬೈಲ್, ಲ್ಯಾಪ್ ಟಾಪ್ ಕದ್ದು ಓಡುವ ಭರದಲ್ಲಿ ಕಳ್ಳನೋರ್ವ ಬಾವಿಗೆ ಬಿದ್ದ ಘಟನೆ ತೆಲಂಗಾಣದ ಹನಮಕೊಂಡ ಜಿಲ್ಲೆಯಲ್ಲಿ ನಡೆದಿದೆ. ನಮಕೊಂಡ ಜಿಲ್ಲೆಯ ಹಾಸನಪರ್ತಿ ಮಂಡಲದ ಅನಂತಸಾಗರದ ಎಂಜಿನಿಯರಿಂಗ್ ಕಾಲೇಜಿನ ಬಾಲಕಿಯರ ಹಾಸ್ಟೆಲ್ ಗೆ ನುಗ್ಗಿದ್ದ ಕಳ್ಳ, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳನ್ನು ಕದ್ದಿದ್ದಾನೆ. ಕದ್ದ ಬಳಿಕ ಹಾಸ್ಟೆಲ್ ನಿಂದ ಪರಾರಿಯಾಗುತ್ತಿರುವ ಗಡಿಬಿಡಿಯಲ್ಲಿ ಬಾವಿಯೊಳಗೆ ಬಿದ್ದಿದ್ದಾನೆ.

ಬೆಳಗ್ಗಿನವರೆಗೂ ಕಳ್ಳ ಬಾವಿಯೊಳಗೆಯೇ ಸಿಲುಕಿದ್ದಾನೆ. ಬಳಿಕ ಸಹಾಯಕ್ಕಾಗಿ ಕೂಗಿಕೊಂಡಾಗ ಬಾವಿಯಲ್ಲಿ ಕಳ್ಳ ಇರುವುದು ಗೊತ್ತಾಗಿದೆ. ತಕ್ಷಣವೇ ಸ್ಥಳೀಯರು ಹಗ್ಗದ ಸಹಾಯದಿಂದ ಕಳ್ಳನನ್ನು ಬಾವಿಯಿಂದ ಹೊರ ತೆಗೆದಿದ್ದಾರೆ.

ಹಾಸ್ಟೆಲ್ ನಿಂದ ಮೊಬೈಲ್, ಲ್ಯಾಪ್ ಟಾಪ್ ಕದ್ದು ಓಡುವಾಗ ಬಾವಿಗೆ ಬಿದ್ದಿರುವುದಾಗಿ ಕಳ್ಳ ಇದೇ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಂಡಿದ್ದಾರೆ.

- Advertisement -

Related news

error: Content is protected !!