Monday, April 29, 2024
spot_imgspot_img
spot_imgspot_img

ಬಾಲ್ಯದ ಶಿಕ್ಷಕರನ್ನು ಭೇಟಿಯಾದ ಪ್ರಧಾನಿ ಮೋದಿ; ಶಿಷ್ಯನಿಗೆ ಗುರುವಿನಿಂದ ಆಶೀರ್ವಾದ

- Advertisement -G L Acharya panikkar
- Advertisement -

‘ಊರಿಗೆ ಅರಸನಾದರೂ ತಾಯಿಗೆ ಮಗ ಅಂತಾರೆ, ‘ಜಗತ್ತಿಗೆ ಸಾಮ್ರಾಟನಾದರೂ ಗುರುವಿಗೆ ಆತ ಶಿಷ್ಯನೇ ಅಂತಾರೆ ಹಿರಿಯರು. ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರದಲ್ಲಿ ಈ ಎರಡು ಮಾತುಗಳೂ ಸತ್ಯವಾಗಿವೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇಡೀ ದೇಶವನ್ನೇ ಆಳುತ್ತಾರೆ. ಆದರೆ ತಾಯಿ ಹೀರಾಬೆನ್ ಅವರ ಬಳಿ ಹೋದಾಗ, ಮಗುವಿನಂತೆ ಅವರ ಕಾಲ ಬದಿ ಕುಳಿತು ಯೋಗಕ್ಷೇಮ ವಿಚಾರಿಸುತ್ತಾರೆ. ನಿನ್ನೆಯೂ ಅಷ್ಟೇ ಗುಜರಾತ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಬಾಲ್ಯದಲ್ಲಿ ತಮಗೆ ಅಕ್ಷರ ಕಲಿಸಿದ ಶಿಕ್ಷಕರೊಬ್ಬರ ಮನೆಗೆ ತೆರಳಿದ್ದಾರೆ. ಅವರ ಆಶೀರ್ವಾದ ಪಡೆದು, ಆರೋಗ್ಯ ವಿಚಾರಿಸಿದ್ದಾರೆ. ಶಿಷ್ಯನನ್ನು ನೋಡಿ ಸಂತಸಗೊಂಡ ಗುರುಗಳು, ಮೋದಿ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಗುರು ಶಿಷ್ಯನ ಬಾಂಧವ್ಯದ ಅಪರೂಪದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ.

ಶಿಕ್ಷಕರನ್ನು ಭೇಟಿಯಾದ ಪ್ರಧಾನಿ ಮೋದಿ

ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾಲ್ಯದ ಶಿಕ್ಷಕರನ್ನು ಭೇಟಿಯಾಗಿ, ಆಶೀರ್ವಾದ ಪಡೆದಿದ್ದಾರೆ. ನಿನ್ನೆ ಗುಜರಾತ್‌ನ ನವಸಾರಿಯ ವಡ್‌ನಗರದಲ್ಲಿ ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ತಮ್ಮ ಬಾಲ್ಯದ ಶಿಕ್ಷಕ ಜಗದೀಶ್ ನಾಯಕ್ ಅವರ ಮನೆಗೆ ತೆರಳಿದ ಪ್ರಧಾನಿ, ಅವರ ಆಶೀರ್ವಾದ ಪಡೆದಿದ್ದಾರೆ.

ಕೆಲಸದ ಒತ್ತಡದಲ್ಲೂ ಗುರುಗಳ ಭೇಟಿ

ಒಂದು ದಿನದ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಹಲವು ಯೋಜನೆಗಳನ್ನು ಉದ್ಗಾಟಿಸಿದ್ದು, ಈ ನಡುವೆ ಬಿಡುವು ಮಾಡಿಕೊಂಡು ಶಾಲಾ ಶಿಕ್ಷಕರನ್ನು ಭೇಟಿ ಮಾಡಿದ್ದಾರೆ. ವೃದ್ಧಾಪ್ಯದಲ್ಲಿರುವ ಶಿಕ್ಷಕ ಜಗದೀಶ್ ನಾಯಕ್ ಅವರ ಆರೋಗ್ಯ ವಿಚಾರಿಸಿದ ಮೋದಿ, ಅವರಿಗೆ ಧೈರ್ಯ ತುಂಬಿದ್ದಾರೆ. ಶಿಷ್ಯನನ್ನು ನೋಡಿ ಸಂತಸಗೊಂಡ ಶಿಕ್ಷಕ ಜಗದೀಶ್ ನಾಯಕ್, ಪ್ರಧಾನಿ ನರೇಂದ್ರ ಮೋದಿ ಅವರ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ.

ಗುರು ಶಿಷ್ಯನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಇನ್ನು ಬಾಲ್ಯದಲ್ಲಿ ಕಲಿಸಿದ ಶಿಕ್ಷಕರನ್ನು ಭೇಟಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಫೋಟೊದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಶಿಕ್ಷಕರಿಗೆ ಕೈಮುಗಿದು ನಮಸ್ಕರಿಸುತ್ತಿದ್ದರೆ, ಅವರ ಶಾಲಾ ಶಿಕ್ಷಕರು ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸುತ್ತಿದ್ದಾರೆ. ಇದಕ್ಕೆ ಮೋದಿ ಅಭಿಮಾನಿಗಳು, ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಖುಷಿಯಿಂದ ಕಾಮೆಂಟ್ ಮಾಡಿ, ಶೇರ್ ಮಾಡಿದ್ದಾರೆ

- Advertisement -

Related news

error: Content is protected !!