Thursday, May 16, 2024
spot_imgspot_img
spot_imgspot_img

ಬಾಳೆಹಣ್ಣು ತಿಂದ ತಕ್ಷಣ ಇವುಗಳನ್ನು ತಿನ್ನಲೇ ಬಾರದು..!

- Advertisement -G L Acharya panikkar
- Advertisement -

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್, ಫೈಬರ್ ಇರುವುದರಿಂದ ಒಂದೊಂದು ಬಾಳೆಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಆದರೆ ಬಾಳೆಹಣ್ಣಿನೊಂದಿಗೆ ನೀವು ಕೆಲವೊಂದು ಆಹಾರಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯ ಹದಗೆಡಬಹುದು.

ಬಾಳೆಹಣ್ಣು ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಬಾಳೆಹಣ್ಣನ್ನು ಇಷ್ಟಪಡುತ್ತಾರೆ. ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಬಾಳೆಹಣ್ಣಿನಲ್ಲಿಇರುವುದರಿಂದ ಇದನ್ನು ಒಂದು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುವುದು. ಊಟ ಮಾಡಿಲ್ಲವಾದರೂ ಬಾಳೆಹಣ್ಣನ್ನು ಸೇವಿಸಿ ಮಲಗುವವರು ಬಹಳಷ್ಟು ಜನರಿದ್ದಾರೆ. ಬಾಳೆಹಣ್ಣು ಪೊಟ್ಯಾಸಿಯಮ್, ಫೈಬರ್ ಮತ್ತು ವಿಟಮಿನ್ ಬಿ 6 ನ ಅತ್ಯುತ್ತಮ ಮೂಲವಾಗಿದೆ. ಇದಲ್ಲದೆ, ಬಾಳೆಹಣ್ಣು ತಿನ್ನುವುದರಿಂದ ದೇಹವು ಕಾರ್ಬೋಹೈಡ್ರೇಟ್‌ಗಳನ್ನು ಪಡೆಯುತ್ತದೆ. ಆದರೆ ಬಾಳೆಹಣ್ಣನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಂಯೋಜನೆಯೊಂದಿಗೆ ತಿಂದಾಗ ಮಾತ್ರ ನೀವು ಬಾಳೆಹಣ್ಣಿನ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತೀರಿ.

ಕೆಲವರು ಬಾಳೆಹಣ್ಣನ್ನು ತಿನ್ನುವಾಗ ಅದರ ಜೊತೆ ಇನ್ನಿತರ ಆಹಾರವನ್ನು ಸೇವಿಸುತ್ತಾರೆ. ಅದರಲ್ಲೂ ಫ್ರೂಟ್ ಸಲಾಡ್‌ ಜೊತೆಗೆ ನಾನಾ ರೀತಿಯ ಹಣ್ಣನ್ನು ಬಾಳೆಹಣ್ಣಿನೊಂದಿಗೆ ಸಂಯೋಜನೆ ಮಾಡಿ ನೀಡುತ್ತಾರೆ. ಈ ತಪ್ಪು ಸಂಯೋಜನೆಯು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ಹಾಗಾದರೆ ಬಾಳೆಹಣ್ಣಿನೊಂದಿಗೆ ಯಾವ ವಸ್ತುಗಳನ್ನು ಸೇವಿಸಬಾರದು ಎಂಬುದನ್ನು ನಾವಿಲ್ಲಿ ನೋಡೋಣ.

​ಬಾಳೆಹಣ್ಣು ಮತ್ತು ಮೊಸರು

ಸಾಮಾನ್ಯವಾಗಿ ಜನರು ಬಾಳೆಹಣ್ಣು ಮತ್ತು ಮೊಸರು ತಿನ್ನಲು ಸಲಹೆ ನೀಡುತ್ತಾರೆ. ಆದರೆ ಇದು ಸರಿಯಲ್ಲ. ಬಾಳೆಹಣ್ಣು ಮತ್ತು ಮೊಸರು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆಯ ಆಮ್ಲೀಯತೆ ಹೆಚ್ಚಾಗುತ್ತದೆ, ಇದು ದೇಹಕ್ಕೆ ಹಾನಿ ಮಾಡುತ್ತದೆ. ಬೇಕಾದರೆ ನೀವು ಬಾಳೆಹಣ್ಣು ತಿಂದು 2 ಗಂಟೆಗಳ ನಂತರ ಮೊಸರನ್ನು ಸೇವಿಸಬಹುದು.

​ಬಾಳೆಹಣ್ಣು ಮತ್ತು ನೀರು

ಕೆಲವರಿಗೆ ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಬಾಳೆಹಣ್ಣು ಮತ್ತು ನೀರನ್ನು ಒಟ್ಟಿಗೆ ಸೇವಿಸಬಾರದು. ಹಾಗೆಯೇ ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯಬಾರದು. ಬಾಳೆಹಣ್ಣು ತಿಂದ ನಂತರ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ. ಇದರೊಂದಿಗೆ ನೆಗಡಿ, ಕೆಮ್ಮು,ಶೀತ ಬರಬಹುದು. ಬಾಳೆಹಣ್ಣು ತಿಂದ ಅರ್ಧ ಗಂಟೆಯ ನಂತರ ಯಾವಾಗ ಬೇಕಾದರೂ ನೀರು ಕುಡಿಯ ಬಹುದು.

​ಬಾಳೆಹಣ್ಣು ಹಾಗೂ ಸಿಟ್ರಸ್‌ ಹಣ್ಣುಗಳು

ಬಾಳೆಹಣ್ಣು ಮತ್ತು ಸಿಟ್ರಸ್‌ನಿಂದಕೂಡಿರುವ ಹಣ್ಣುಗಳು ಉದಾಹರಣೆಗೆ ಕಿತ್ತಳೆಹಣ್ಣು ಒಟ್ಟಿಗೆ ಸೇವಿಸಬಾರದು. ಬಾಳೆಹಣ್ಣು ಹಾಗೂ ಕಿತ್ತಳೆ ಹಣ್ಣು ಎರಡೂ ಪೌಷ್ಟಿಕಾಂಶ-ಭರಿತ ಹಣ್ಣುಗಳಾಗಿವೆ. ಎರಡೂ ದೇಹಕ್ಕೆ ಬಹಳ ಒಳ್ಳೆಯದು. ಆದರೆ ಬಾಳೆಹಣ್ಣು ಮತ್ತು ಕಿತ್ತಳೆಯನ್ನು ಒಟ್ಟಿಗೆ ತಿಂದರೆ ಅದು ದೇಹಕ್ಕೆ ಹಾನಿಯನ್ನುಂಟು ಮಾಡುತ್ತದೆ. ಬಾಳೆಹಣ್ಣು ಮತ್ತು ಕಿತ್ತಳೆಯ ಸಂಯೋಜನೆಯು ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ. ಬಾಳೆಹಣ್ಣಿನಲ್ಲಿರುವ ಸಕ್ಕರೆಯ ಜೀರ್ಣಕ್ರಿಯೆಯನ್ನು ಕಿತ್ತಳೆಯು ತಡೆಯುತ್ತದೆ. ಬಾಳೆಹಣ್ಣುಗಳನ್ನು ಬರೀ ಕಿತ್ತಳೆ ಹಣ್ಣಿನೊಂದಿಗೆ ಮಾತ್ರವಲ್ಲ ಯಾವುದೇ ಸಿಟ್ರಸ್ ಹಣ್ಣುಗಳೊಂದಿಗೆ ಬೆರೆಸಬಾರದು.

​ಬಾಳೆಹಣ್ಣು ಮತ್ತು ಮೊಟ್ಟೆ

ಆಯುರ್ವೇದದಲ್ಲಿ, ಯಾವುದೇ ಆಹಾರದ ಸಂಯೋಜನೆಯನ್ನು ಅದರ ಪರಿಣಾಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಬಾಳೆಹಣ್ಣಿನ ರುಚಿ ಸಿಹಿಯಾಗಿರುತ್ತದೆ, ಆದರೆ ಮೊಟ್ಟೆಯ ರುಚಿ ವಿಭಿನ್ನವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬಾಳೆಹಣ್ಣು ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿನ್ನಬಾರದು. ಬಾಳೆಹಣ್ಣು ಮತ್ತು ಮೊಟ್ಟೆಯನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಇದರೊಂದಿಗೆ ಕಫದ ಸಮಸ್ಯೆಯೂ ಉಂಟಾಗಬಹುದು.

ಮಾಂಸಾಹಾರ

ಸಾಮಾನ್ಯವಾಗಿ ಊಟ ಆದ ಮೇಲೆ, ಅದು ಸಸ್ಯಾಹಾರವೇ ಆಗಿರಲಿ ಅಥವಾ ಮಾಂಸಾಹಾರವೇ ಆಗಿರಲಿ. ಊಟ ಆದ ಮೇಲೆ ಬಾಳೆಹಣ್ಣು ತಿನ್ನುವ ಅಭ್ಯಾಸ ಬಹುತೇಕರಿಗೆ ಇದೆ. ಯಾಕೆಂದರೆ ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ ಎಂದು. ಆದರೆ ಮೀನು ಅಥವಾ ಮಾಂಸಾಹಾರ ಸೇವಿಸಿದ ತಕ್ಷಣ ಬಾಳೆಹಣ್ಣನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಇನ್ನೂ ಕೆಲವರಿಗೆ ಅಲರ್ಜಿಯನ್ನು ಉಂಟುಮಾಡಬಹುದು.

ಬಾಳೆಹಣ್ಣು ಮತ್ತು ಪೇರಳೆಹಣ್ಣು

ಬಾಳೆಹಣ್ಣು ಮತ್ತು ಪೇರಳೆಯನ್ನು ಒಟ್ಟಿಗೆ ತೆಗೆದುಕೊಳ್ಳಬಾರದು. ಬಾಳೆಹಣ್ಣು ಮತ್ತು ಕಿತ್ತಳೆ ಎರಡೂ ಅನಿಲವನ್ನು ಉತ್ತೇಜಿಸುತ್ತದೆ. ಹಾಗಾಗಿ ಇವೆರಡನ್ನು ಒಟ್ಟಿಗೆ ಅಥವಾ ಒಂದಾದ ನಂತರ ಒಂದು ತಿನ್ನಬಾರದು.

- Advertisement -

Related news

error: Content is protected !!