Thursday, May 16, 2024
spot_imgspot_img
spot_imgspot_img

ಶುಂಠಿಯಲ್ಲಿರುವ ಔಷಧೀಯ ಗುಣ

- Advertisement -G L Acharya panikkar
- Advertisement -

ಶುಂಠಿಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳಿದ್ದು, ಇದನ್ನು ಬಳಸಿದರೆ ಆರೋಗ್ಯಕ್ಕೆ ಲಾಭಕಾರಿ.

ಸಾವಿರಾರು ವರ್ಷಗಳಿಂದಲೂ ಶುಂಠಿಯನ್ನು ಹಲವಾರು ರೀತಿಯ ಚಿಕಿತ್ಸೆಗೆ ಬಳಸಿಕೊಂಡು ಬರಲಾಗುತ್ತಿದೆ. ಇದು ಚಿಕಿತ್ಸಕಕಾರಿ ಮತ್ತು ಪರಿಣಾಮಕಾರಿ ಆಗಿದೆ. ಉರಿಯೂತ ಶಮನಕಾರಿ, ನೋವು ನಿವಾರಕ, ಆಂಟಿಆಕ್ಸಿಡೆಂಟ್ ಗುಣಗಳು ಇದರಲ್ಲಿ ಇದೆ. ಇದು ಉರಿಯೂತ, ಊತ ಮತ್ತು ನೋವನ್ನು ಕಡಿಮೆ ಮಾಡುವುದು. ಇದು ಸೆರೊಟೊನಿನ್ ನ್ನು ಹೆಚ್ಚಿಸುವುದು ಮತ್ತು ಕರುಳಿನಲ್ಲಿ ಇರುವಂತಹ ಗ್ಯಾಸ್ ನ್ನು ವಿಘಟಿಸುವುದು. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಕ್ಯಾನ್ಸರ್ ಕಾರಕ ಅಂಶಗಳನ್ನು ನಾಶ ಮಾಡುವುದು.ಶುಂಠಿಯಲ್ಲಿ ಇರುವಂತಹ ಅಂಶಗಳು ಅಲರ್ಜಿ ದೂರ ಮಾಡುವುದು.

ಶ್ವಾಸಕೋಶ ಸಮಸ್ಯೆಯನ್ನು ದೂರವಿಡುವುದು. ಶುಂಠಿಯಲ್ಲಿ ಇರುವಂತಹ ಅಲರ್ಜಿ ವಿರೋಧಿ ಗುಣವು ಅಲರ್ಜಿಯನ್ನು ನಿವಾರಣೆ ಮಾಡುವುದು. ಅಸ್ತಮಾ ಮತ್ತು ಬ್ರಾಂಕೈಟಿಸ್ ನ್ನು ದೂರವಿಡುವುದು. ಇದು ವಾಯುನಾಳದ ಸಂಕೋಚನವನ್ನು ತಡೆಯುವುದು ಮತ್ತು ಕಫದ ಸ್ರವಿಸುವಿಕೆ ಉತ್ತೇಜಿಸುವುದು. ಇದು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಗೆ ತುಂಬಾ ಪರಿಣಾಮಕಾರಿ ಗಿಡಮೂಲಿಕೆ.

ಒಂದು ಚಮಚ ಶುಂಠಿ ರಸಕ್ಕೆ ಜೇನುತುಪ್ಪ ಹಾಕಿದರೆ ಗಂಟಲಿನ ಊತ ಕಡಿಮೆ ಆಗುವುದು. ಶುಂಠಿ ಟೀ ಕುಡಿದರೆ ಅದರಿಂದ ಗಂಟಲು ಮತ್ತು ಮೂಗು ಕಟ್ಟುವಿಕೆ ಕಡಿಮೆ ಆಗುವುದು. ಶುಂಠಿ ರಸವನ್ನು ಮೆಂತ್ಯೆ ಮತ್ತು ಜೇನುತುಪ್ಪದ ಜತೆಗೆ ಬೆರೆಸಿಕೊಂಡು ಕುಡಿದರೆ ಅಸ್ತಮಾ ಕಡಿಮೆ ಆಗುವುದು.

- Advertisement -

Related news

error: Content is protected !!