Tuesday, June 16, 2026
spot_imgspot_img
spot_imgspot_img

ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಂಡ ಕರಾವಳಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ

- Advertisement -
- Advertisement -

ಮಂಗಳೂರು: 2023ಕ್ಕೆ ಅದ್ದೂರಿ ಸ್ವಾಗತ ಕೋರುವ ಜೊತೆ ಜೊತೆಗೆ ಕರಾವಳಿಯ ಕುವರ ತುಳು ಚಿತ್ರರಂಗದ ಪ್ರತಿಭಾವಂತ ನಾಯಕ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.

ಕನ್ನಡ ಮತ್ತು ತುಳು ಚಿತ್ರರಂಗದ ಪ್ರತಿಭಾವಂತ ನಾಯಕ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ -9ರ ಆರಂಭದಿಂದಲೂ ಉತ್ತಮವಾಗಿಯೇ ಮನೋರಂಜನೆ ನೀಡಿದ್ದು, ಬಿಗ್ ಬಾಸ್ ಮನೆಯ ಆಟ ಸಾಕಷ್ಟು ಟ್ವಿಸ್ಟ್ ಗಳನ್ನ ಪಡೆದು ಅಂತಿಮ ಹಂತದ ತನಕವೂ ಕೂಡ ರೂಪೇಶ್ ಶೆಟ್ಟಿ ನಿರೀಕ್ಷೆಯನ್ನು ಉಳಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ರೂಪೇಶ್ ಶೆಟ್ಟಿ ಕರುನಾಡಿನ ಅಭಿಮಾನಿಗಳಿಗೆ ನಿರೀಕ್ಷೆಗೂ ಮೀರಿ ಮನೋರಂಜನೆ ನೀಡುತ್ತಿದ್ದರು.

ಫಿನಾಲೆಯಲ್ಲಿ 5 ಜನರ ನಡುವೆ ಹಣಾಹಣಿ ನಡೆದಿದ್ದು, ಕೊನೆಯಲ್ಲಿ ಟಾಪ್ 5 ಸ್ಪರ್ಧಿಗಳ ನಡುವೆ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲೇ ಸಿನಿಮಾ ರಂಗದಲ್ಲಿ ಅಭಿಮಾನಿಗಳ ಸಾಗರವನ್ನೇ ಹೊಂದಿರುವ ಕರಾವಳಿಯ ಪ್ರತಿಭೆ ರೂಪೇಶ್ ಶೆಟ್ಟಿಯವರು ಇದೀಗ ಕರುನಾಡಿನಾದ್ಯಂತ ಮನೆ ಮಗನಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ರೂಪೇಶ್ ಶೆಟ್ಟಿ ಕೇವಲ ನಾಯಕ ನಟ ಮಾತ್ರವಲ್ಲ ಉತ್ತಮ ನಿರ್ದೇಶಕರೂ ಹೌದು. ಜೊತೆಗೆ ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕಿ, ಗಾಯಕ, ಮಾಡೆಲ್ ಮತ್ತು ಅತ್ಯುತ್ತಮ ನಿರೂಪಕನೂ ಹೌದು. ರೂಪೇಶ್ ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ಅಭಿನಯಿಸಿದ್ದಾರೆ.

ಮೊದಲಿಗೆ ಖಾಸಗಿ ಟಿವಿ ಚಾನೆಲ್, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿ ಕಾಣಿಸಿಕೊಂಡ ರೂಪೇಶ್ ಬಳಿಕ ಮಂಗಳೂರಿನಲ್ಲಿ ಆರ್ ಜೆಯಾಗಿ ಜನಪ್ರಿಯತೆ ಗಳಿಸಿದರು. ‘ದಿಬ್ಬಣ’ ಎಂಬ ತುಳು ಚಿತ್ರದಲ್ಲಿ ಕಿರು ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ, ಸಿನಿ ಪ್ರಿಯರ ಮನಗೆದ್ದಿದ್ದಾರೆ. ರೂಪೇಶ್ ಶೆಟ್ಟಿಯವರು ತಾನೇ ನಿರ್ದೇಶಿಸಿ ನಟಿಸಿರುವ ಗಿರಿಗಿಟ್ ಚಿತ್ರವು ನಾಡಿನಾದ್ಯಂತ ತನ್ನ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಕೇವಲ ನಟನಲ್ಲ ಬದಲಾಗಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಸಮಾಜ ಸೇವಕರೂ ಹೌದು. ಕೊರೊನಾ ಸಮಯದಲ್ಲಿ ನೊಂದ ಜೀವಗಳಿಗೆ ಆಹಾರ ವಿತರಿಸಿ ಹೃದಯ ವೈಶಾಲ್ಯತೆ ಮೆರೆದವರು ರೂಪೇಶ್ ಶೆಟ್ಟಿ.

ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಮನಗೆದ್ದು, ಉತ್ತಮ ನಟ, ಸ್ಪರ್ಧಿಯಾಗಿಯೂ ಜನಪ್ರಿಯತೆ ಗಳಿಸಿದವರು. ಇದೀಗ ಅವರು ಬಿಗ್ ಬಾಸ್ ಮನೆಯಿಂದ ಗೆಲುವಿನ ಟ್ರೋಫಿಯೊಂದಿಗೆ ಹೊರನಡೆಯುತ್ತಿದ್ದು ಕರುನಾಡು ತುಳುನಾಟನಿಗೆ ಅದ್ದೂರು ಸ್ವಾಗತ ಕೋರುತ್ತಿದೆ.

- Advertisement -

Related news

error: Content is protected !!