Monday, July 27, 2026
spot_imgspot_img
spot_imgspot_img

ಮಾಣಿ: ಸೆರಾ ಐಡಿಯಲ್ ಗೇರುಬೀಜ ಕಾರ್ಖಾನೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

- Advertisement -
- Advertisement -

ಮಾಣಿ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಆಶ್ರಯದಲ್ಲಿ ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಲೊರೆಟ್ಟೋ ಹೀಲ್ಸ್, ರೋಟರಿ ಕ್ಲಬ್ ಫರಂಗಿ ಪೇಟೆ, ರೋಟರಿ ಕ್ಲಬ್ ಮೊಡಂಕಾಪು, ರೋಟರಿ ಕ್ಲಬ್ ವಿಟ್ಲ, ರೋಟರಿ ಕ್ಲಬ್ ಪಲ್ಗುನಿ ಸಿದ್ಧಕಟ್ಟೆ, ಐಡಿಯಲ್ ಕ್ಯಾಶ್ಯೂ ಇಂಡಸ್ಟ್ರೀಸ್ ಇದರ ಸಹಯೋಗದೊಂದಿಗೆ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ 13/9/2022ರಂದು ಬೆಳಿಗ್ಗೆ ಸಮಯ 9ಗಂಟೆಗೆ ಮಾಣಿ ಸಮೀಪದ ಸೆರಾ ಐಡಿಯಲ್ ಗೇರುಬೀಜ ಕಾರ್ಖಾನೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ರೋ ಪಿ ಎಚ್ ಎಫ್ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಪುಷ್ಪರಾಜ್ ಹೆಗ್ಡೆ, ವಿಜಯ ಫೆರ್ನಾಂಡಿಸ್, ಜಯರಾಮ್ ಶೇಖ, ಪಿಎ ರಹೀಮ್, ಪ್ರಕಾಶ್ ನಾಯಕ್, ಕಾರ್ಯಕ್ರಮದ ನಿರ್ದೇಶಕ ನಾರಾಯಣ ಸಿ ಪೆರ್ನೆ, ಝಡ್ ಎಲ್ ರಮೇಶ್ ತುಂಬೆ, ಸಂಸ್ಥೆಯ ಮುಖ್ಯಸ್ಥರಾದ ಗಂಗಾಧರ ಸೇರ ಮತ್ತು ಮಲ್ಲಿಕಾ ಗಂಗಾಧರ್ ರವರನ್ನು ಗೌರವಿಸಲಾಯಿತು ಮತ್ತು ಆಸ್ಪತ್ರೆಯ ಕ್ಯಾಂಪ್ ಮುಖ್ಯಸ್ಥರಿಗೆ ಸ್ಮರಣಿಕೆ ನೀಡಲಾಯಿತು.

ಸುಮಾರು 250ಕ್ಕಿಂತಲೂ ಹೆಚ್ಚು ಜನ ಕಣ್ಣಿನ ತಪಾಸನೆಯನ್ನು ಮಾಡಿಸಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಬನಾರಿ, ಸಂಸ್ಥೆಯ ಅಡ್ವೈಸರ್ ಜೆ ಕೆ ನಾಯಕ್ ಮತ್ತು ಕ್ಲಬ್‌ಗಳ ಕಾರ್ಯದರ್ಶಿಗಳು ಸದಸ್ಯರು ಮೊದಲಾದವರು ಇದ್ದರು. ಉಮೇಶ್ ಆರ್ ಮೂಲ್ಯ ಧನ್ಯವಾದ ನೆರವೇರಿಸಿದರು.

- Advertisement -

Related news

error: Content is protected !!