Thursday, April 25, 2024
spot_imgspot_img
spot_imgspot_img

ಬಿಗ್‌ ಬಾಸ್‌ ಮನೆಯಲ್ಲಿ ರಾಕ್‌ಸ್ಟಾರ್‍ ರೂಪೇಶ್..! ಶೈನ್ ಶೆಟ್ಟಿಯಂತೆ ಈ ಬಾರಿ ರೂಪೇಶ್ ಶೆಟ್ಟಿ ಗೆಲ್ತಾರಾ?

- Advertisement -G L Acharya panikkar
- Advertisement -

ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ OTT ಆರಂಭವಾಗಿ ರಾಜ್ಯದ ಜನರ ಮನಗೆಲ್ಲಲು ಅಣಿಯಾಗಿದೆ. ಈಗಾಗಲೇ ಸ್ಪರ್ಧಿಗಳು ದೊಡ್ಮನೆಯಲ್ಲಿ ಲಾಕ್ ಆಗಲಿದ್ದಾರೆ. ಇವರ ಮಧ್ಯೆ ಕರಾವಳಿ ಪ್ರತಿಭೆ, ನಿದೇರ್ಶಕ, ಗಿರಿಗಿಟ್ ಖ್ಯಾತಿಯ ರೂಪೇಶ್ ಶೆಟ್ಟಿ ಬಿಗ್ ಬಾಸ್’ಗೆ ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ಎಂಟ್ರಿ ಕರಾವಳಿಗರಿಗೆ ಖುಷಿ ತಂದಿದೆ. ಕೊನೆಯ ಸೀಸನ್ ಅನ್ನು ಶೈನಿ ಶೆಟ್ಟಿ ಗೆದ್ದಿದ್ದರು. ಈ ಬಾರಿಯೂ ಮತ್ತೊಬ್ಬ ಶೆಟ್ಟರ ಹುಡುಗ, ಕೋಸ್ಟಲ್‌ವುಡ್‌ನ ರಾಕ್‌ ಸ್ಟಾರ್‍ ರೂಪೇಶ್‌, ಬಿಗ್ ಬಾಸ್ ಟೈಟಲ್ ತನ್ನದಾಗಿಸಿಕೊಳ್ತಾನಾ ಎಂಬ ನಿರೀಕ್ಷೆ ಹೆಚ್ಚಾಗಿದೆ.!

ಬಿಗ್ ಬಾಸ್ ವೇದಿಕೆ ಎಂಟ್ರಿ ಕೊಡುತ್ತಿದಂತೆ ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ಅರೆ ಕ್ಷಣ ದಂಗಾಗುವಂತೆ ಮಾಡಿದರು. ರೂಪೇಶ್ ತಮ್ಮ ಮಾತೃಭಾಷೆ ತುಳುವಿನಯಲ್ಲಿಯೇ ಎಲ್ಲರಿಗೂ ನಮಸ್ಕಾರ ಮಾಡಿದ್ದು ವಿಶೇಷವಾಗಿತ್ತು. ಏನಿದು ಬೈಗುಳ ಎಂದು ಕಿಚ್ಚ ವೇದಿಕೆಯಲ್ಲೇ ಕಾಲೆಳೆದ ಪ್ರಸಂಗವೂ ನಡೆಯಿತು.

ರೂಪೇಶ್ ಹೆಸರಿಗೆ ತಕ್ಕಂತೆ ರೂಪವಂತ..!
ರೂಪೇಶ್ ಶೆಟ್ಟಿ ಕರಾವಳಿ ಭಾಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ. ತುಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ರೂಪೇಶ್ ಹೆಸರಿಗೆ ತಕ್ಕಂತೆ ರೂಪವಂತ. ನಟನೆ ಜೊತೆಗೆ ನಿರೂಪಣೆಯೂ ಈತನಿಗೆ ಒಲಿದಿದೆ. 2018 ರಲ್ಲಿ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿ ತುಳುವಿನಲ್ಲಿ ಬಿಡುಗಡೆ ಆದ ಅಮ್ಮೆರ್ ಪೊಲೀಸ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ನಂತರ 2019 ರಲ್ಲಿ ನಿರ್ದೇಶನಕ್ಕೂ ಇಳಿದು ನಟಿಸಿದ ಗಿರಿಗಿಟ್ (ತುಳು ಸಿನಿಮಾ) ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ತುಳು ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಇದಾಯಿತು.

ಇವರು ಕನ್ನಡದಲ್ಲಿ ನಿಶಬ್ಧ 2',ಡೇಂಜರ್ ಜೋನ್’,`ಪಿಶಾಚಿ 2′ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಸುಮಂತ್ ಹಾಗೂ ಭಾವನಾ ಜೊತೆ ಗೋವಿಂದ ಗೋವಿಂದ ಎಂಬ ಚಿತ್ರದಲ್ಲಿ ನಟಿಸಿದ್ದರು. ತುಳು ಭಾಷೆಯ ಸೂಪರ್ ಸ್ಟಾರ್ ಆಗಿರುವ ನಟ ರೂಪೇಶ್ ಶೆಟ್ಟಿ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

- Advertisement -

Related news

error: Content is protected !!