Monday, April 29, 2024
spot_imgspot_img
spot_imgspot_img

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; 23 ಅಭ್ಯರ್ಥಿಗಳ ಹೆಸರು ಪ್ರಕಟ- ಇನ್ನೂ 12 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿ

- Advertisement -G L Acharya panikkar
- Advertisement -
vtv vitla

ನವದೆಹಲಿ: ವಿಧಾನಸಭೆ ಚುನಾವಣೆಗೆ ಬಿಜೆಪಿಯು ಇದೀಗ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 23 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಇನ್ನು 12 ಕ್ಷೇತ್ರಗಳ ಟಿಕೆಟ್ ಘೋಷಣೆ ಬಾಕಿಯಿದೆ.

ಕರಾವಳಿಯಲ್ಲಿ ಬಾಕಿ ಉಳಿದಿದ್ದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗಿದ್ದು ಸಾಮಾನ್ಯ ಕಾರ್ಯಕರ್ತ ಗುರುರಾಜ್ ಗಂಟಿಹೊಳೆ ಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಇನ್ನು ಆರ್ ಆರ್ ಎಸ್ ಹಿನ್ನಲೆಯ ಗುರುರಾಜ್ ಗಂಟಿಹೊಳೆ, ಆರ್ ಎಸ್ ಎಸ್ ಪ್ರಚಾರಕರಾಗಿ ಪುತ್ತೂರು ಸುಳ್ಯದಲ್ಲಿ ಕೆಲಸ ಮಾಡಿದ್ದರು. ಅವರಿಗೆ ಟಿಕೆಟ್ ನೀಡುವ ಮೂಲಕ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿದ್ದೇವೆ ಎಂಬ ಸಂದೇಶ ಬಿಜೆಪಿ ರವಾನಿಸಿದೆ.

ಮೂಡಿಗೆರೆ ಕ್ಷೇತ್ರದ ಹಾಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಸೇರಿ 7 ಮಂದಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಮಂಗಳವಾರ 189 ಮಂದಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ಬಿಜೆಪಿ ಇದೀಗ ಒಟ್ಟು 212 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಇನ್ನೂ 12 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.

23 ಮಂದಿ ಅಭ್ಯರ್ಥಿಗಳ ವಿವರ:
ದೇವರ ಹಿಪ್ಪರಗಿ-ಸೋಮನಗೌಡ ಪಾಟೀಲ್
ಬಸವನ ಬಾಗೇವಾಡಿ-ಎಸ್.ಕೆ.ಬೆಳ್ಳುಬ್ಬಿ
ಇಂಡಿ-ಕಾಸಗೌಡ ಬಿರಾದಾರ್
ಗುರುಮಿಠ್ಕಲ್-ಲಲಿತಾ ಅಣ್ಣಾಪುರ್
ಬೀದರ್-ಈಶ್ವರ್ ಸಿಂಗ್ ಠಾಕೂರ್
ಭಾಲ್ಕಿ-ಪ್ರಕಾಶ್ ಖಂಡ್ರೆ
ಗಂಗಾವತಿ-ಪರಣ್ಣ ಮುನವಳ್ಳಿ
ಕಲಘಟಗಿ-ನಾಗರಾಜ್ ಛಬ್ಬಿ
ಹಾನಗಲ್-ಶಿವರಾಜ್ ಸಜ್ಜನರ್
ಹಾವೇರಿ-ಗವಿಸಿದ್ದಪ್ಪ ದ್ಯಾಮನ್ನವರ್
ಹರಪನಹಳ್ಳಿ-ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ-ಲೋಕಿಕೆರೆ ನಾಗರಾಜ್
ದಾವಣಗೆರೆ ದಕ್ಷಿಣ-ಅಜಯ್ ಕುಮಾರ್
ಮಾಯಕೊಂಡ-ಬಸವರಾಜ್ ನಾಯ್ಕ್
ಚನ್ನಗಿರಿ-ಶಿವಕುಮಾರ್
ಬೈಂದೂರು-ಗುರುರಾಜ್ ಗಂಟಿಹೊಳೆ
ಮೂಡಿಗೆರೆ-ದೀಪಕ್ ದೊಡ್ಡಯ್ಯ
ಗುಬ್ಬಿ-ಎಸ್.ಡಿ.ದಿಲೀಪ್ ಕುಮಾರ್
ಶಿಡ್ಲಘಟ್ಟ-ರಾಮಚಂದ್ರ ಗೌಡ
ಕೆಜಿಎಫ್-ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ-ಚಿದಾನಂದ
ಅರಸೀಕೆರೆ-ಜಿ.ವಿ.ಬಸವರಾಜು
ಎಚ್.ಡಿ.ಕೋಟೆ-ಕೃಷ್ಣ ನಾಯ್ಕ್ ಅವರಿಗೆ ಟಿಕೆಟ್ ನೀಡಲಾಗಿದೆ.

- Advertisement -

Related news

error: Content is protected !!