Friday, March 29, 2024
spot_imgspot_img
spot_imgspot_img

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ; ಹಿಂದೂಗಳಿಗೆ ಸೀಮಿತವಾಗದೆ ಎಲ್ಲಾ ವಂಚಿತ, ದೀನದಲಿತ ಸಮುದಾಯಗಳನ್ನು ತಲುಪುವಂತೆ ಪ್ರಧಾನಿ ಮೋದಿ ಕರೆ

- Advertisement -G L Acharya panikkar
- Advertisement -

ವಿರೋಧ ಪಕ್ಷಗಳು ಅನುಸರಿಸುತ್ತಿರುವ ವಂಶಾಡಳಿತ, ಕುಟುಂಬ ಆಧಾರಿತ, ಜಾತಿವಾದಿ ಮತ್ತು ತುಷ್ಟೀಕರಣ ರಾಜಕೀಯವನ್ನು ನಿರ್ಮೂಲನೆ ಮಾಡಲು ಬಿಜೆಪಿ ಒತ್ತು ನೀಡುತ್ತಿರುವಾಗಲೂ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿಂದೂಗಳು ಮಾತ್ರವಲ್ಲದೆ ವಂಚಿತ ಮತ್ತು ದೀನದಲಿತ ಸಮುದಾಯಗಳನ್ನು ತಲುಪುವಂತೆ ಪಕ್ಷವನ್ನು ಭಾನುವಾರ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್​​ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಪ್ರಧಾನಿ ಮೋದಿಯವರು, ಇತರ ಸಮುದಾಯಗಳಲ್ಲಿಯೂ ವಂಚಿತ ಮತ್ತು ದೀನದಲಿತ ವರ್ಗಗಳಿವೆ ಎಂದು ಹೇಳಿದರು. ನಾವು ಕೇವಲ ಹಿಂದೂಗಳಿಗೆ ಸೀಮಿತವಾಗದೆ ಈ ಎಲ್ಲಾ ವಂಚಿತ ಸಮುದಾಯಗಳಿಗಾಗಿ ಕೆಲಸ ಮಾಡಬೇಕು ಎಂದು ಹೇಳಿರುವುದಾಗಿ ಪಕ್ಷದ ಮೂಲವೊಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಯವರು ಪಕ್ಷಕ್ಕೆ ನಿರ್ದೇಶನ ನೀಡಿದ್ದು, ಚುನಾವಣಾ ಪರೀಕ್ಷೆಗಳಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರ ವಹಿಸಿದ ಉತ್ತರ ಪ್ರದೇಶದ ಎರಡು ಕ್ಷೇತ್ರಗಳಾದ ಅಜಂಗಢ ಮತ್ತು ರಾಂಪುರ ಲೋಕಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆದ್ದ ಒಂದು ವಾರದ ನಂತರ ಬಂದಿದೆ.

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪಸ್ಮಾಂಡ ಮುಸ್ಲಿಮರಂತಹ ಸಮುದಾಯಗಳನ್ನು ತಲುಪಲು ಪ್ರಧಾನಿಯವರ ಹೇಳಿಕೆಯು ಪಕ್ಷಕ್ಕೆ ನೀಡಿದ ಸಂದೇಶವಾಗಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಬಿಜೆಪಿಯು ಗಣನೀಯ ಅಸ್ತಿತ್ವವನ್ನು ಅಥವಾ ಚುನಾವಣಾ ಲಾಭವನ್ನು ಗಳಿಸಲು ಸಾಧ್ಯವಾಗದ ಪ್ರದೇಶಗಳ ಮೇಲೆ ಕಣ್ಣಿಟ್ಟಿರುವುದರಿಂದ ಪಕ್ಷಕ್ಕೆ ಪ್ರಧಾನಿ ಮೋದಿಯವರ ನಿರ್ದೇಶನವು ಮಹತ್ವದ್ದಾಗಿದೆ. ಕಳೆದ ವರ್ಷ ಇದೇ ರೀತಿಯ ಹೇಳಿಕೆಯಲ್ಲಿ ಹಿಂದೂಗಳನ್ನು ಹೊರತುಪಡಿಸಿ ಇತರ ಸಮುದಾಯಗಳ ಹೃದಯವನ್ನು ತಲುಪಲು ಮತ್ತು ಗೆಲ್ಲಲು ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳನ್ನು ಮೋದಿ ಒತ್ತಾಯಿಸಿದ್ದರು.

ಬಿಜೆಪಿಯು ಚುನಾವಣಾ ಲಾಭದ ದೃಷ್ಟಿಯಿಂದ ಗಮನಾರ್ಹ ಪ್ರಗತಿಯನ್ನು ಸಾಧಿಸಲು ವಿಫಲವಾಗಿರುವ ಕೇರಳದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯವನ್ನು ತನ್ನ ಪರವಾಗಿ ಇಟ್ಟುಕೊಳ್ಳುವುದನ್ನು ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು.

ರಾಜಕೀಯ ನಿರ್ಣಯದ ಮೇಲಿನ ಚರ್ಚೆಯ ವೇಳೆ ಮೋದಿ ಯಾವುದೇ ಸಲಹೆಗಳನ್ನು ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಪ್ರಧಾನಿಯವರು ಚರ್ಚೆಯಲ್ಲಿ ವಿವಿಧ ಸಲಹೆಗಳನ್ನು ನೀಡಿದ್ದಾರೆ. ಈಶಾನ್ಯ ಭಾಗದ ಅಭಿವೃದ್ಧಿ ಬಗ್ಗೆ ಅವರು ಸಲಹೆ ನೀಡಿದ್ದಾರೆ.

ನಮ್ಮ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಕುರಿತಾದ ಸಂದೇಶವನ್ನು ಬಿಜೆಪಿ ಕಾರ್ಯಕರ್ತರು ತಳಮಟ್ಟದಲ್ಲಿ ಹೇಗೆ ಕೊಂಡೊಯ್ಯಬೇಕು ಎಂಬುದರ ಕುರಿತು ಮಾತನಾಡಿದ ಅವರು, ಅವರ ಸರಳತೆ ಮತ್ತು ವಿನಮ್ರ ಹಿನ್ನೆಲೆಯ ಸಂದೇಶವನ್ನು ಅವರ ಹೋರಾಟಗಳ ಕಥೆಯೊಂದಿಗೆ ಜನರಿಗೆ ತಲುಪಿಸಬೇಕು. ಚರ್ಚೆಯ ವಿವಿಧ ಹಂತಗಳಲ್ಲಿ ಅವರು ಸಲಹೆ ನೀಡಿದರು ಎಂದಿದ್ದಾರೆ.

- Advertisement -

Related news

error: Content is protected !!