Saturday, May 18, 2024
spot_imgspot_img
spot_imgspot_img

ಬೆಂಗಳೂರಿನ ಗಲ್ಲಿ ಕ್ರಿಕೆಟ್​ಗೆ ಸಂಸ್ಕೃತದ ಕಾಮೆಂಟ್ರಿ; ಪ್ರಧಾನಿ ಮೋದಿ ಮೆಚ್ಚುಗೆ

- Advertisement -G L Acharya panikkar
- Advertisement -

ಕ್ರಿಕೆಟ್ ಆಟದಲ್ಲಿ ಸಾಮಾನ್ಯವಾಗಿ ಇಂಗ್ಲಿಷ್, ಕನ್ನಡ, ಹಿಂದಿಯಲ್ಲಿ ಕಾಮಿಂಟ್ರಿ ಕೇಳಿರ್ತೀರಿ. ಆದರೆ ಬೆಂಗಳೂರಿನಲ್ಲಿ ಕನ್ನಡಿಗರೊಬ್ಬರು ಸಂಸ್ಕೃತದಲ್ಲಿ ಕಾಮೆಂಟ್ರಿ ಮಾಡಿ ವೈರಲ್ ಆಗಿದ್ದಾರೆ. ಅಷ್ಟೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ, ಈ ಗಲ್ಲಿ ಕ್ರಿಕೆಟ್​ನ ಸಂಸ್ಕೃತ ಕಾಮೆಂಟರಿಗೆ ಮೆಚ್ಚುಗೆ ವ್ಯಕ್ತಪಡಿಸಿ ರೀ ಟ್ವಿಟ್ ಮಾಡಿದ್ದಾರೆ. ಒಂದೇ ಒಂದು ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ವಠಾರ, ಅಂದರೆ ಸಂಸ್ಕೃತ ಭಾರತೀ ಆವರಣದಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ.‌ ಅಲ್ಲಿನ ವಿದ್ಯಾರ್ಥಿಗಳು ಕ್ರಿಕೆಟ್ ಆಡುವಾಗ ಸಂಸ್ಕೃತ ವಿದ್ವಾಂಸರಾದ ಲಕ್ಷ್ಮೀನಾರಾಯಣ್ ಸಂಸ್ಕೃತದಲ್ಲಿ ಕಾಮೆಂಟರಿ ಮಾಡಿದ್ದರು. ಆ ವಿಡಿಯೋವನ್ನ ಸಂಸ್ಕೃತ ಮತ್ತು ಕ್ರಿಕೆಟ್ ಎಂದು ಟ್ವೀಟ್ ಮಾಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದಕ್ಕೆ ಇನ್ನೊಂದು ಪ್ರಮುಖ ಕಾರಣ ಅಂದರೆ ಪ್ರಧಾನಿ ನರೇಂದ್ರ ಮೋದಿ. ಹೌದು ಮೋದಿಯರು ಈ ವಿಡಿಯೋ ರೀಟ್ವಿಟ್ ಮಾಡಿದ್ದರ ಪರಿಣಾಮ ಲಕ್ಷಾಂತರ ಮಂದಿ ವಿಡಿಯೋ ನೋಡಿ ಶೇರ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರೀ ಟ್ವೀಟ್​ಗೆ ದೇಶಾದ್ಯಂತ ಹವಾ ಸೃಷ್ಟಿಸಿರೋ ಕ್ರಿಕೆಟ್ ಸಂಸ್ಕೃತ ಕಾಮೆಂಟರಿ

ಪ್ರಧಾನಿ ಮೋದಿ ಸಂಸ್ಕೃತ ಕ್ರಿಕೆಟ್ ಕಾಮೆಂಟರಿಯನ್ನ ರಿಟ್ವೀಟ್ ಮಾಡಿದ ನಂತರ ದೇಶಾದ್ಯಂತ ಪ್ರಶಂಸೆ ಮಹಾಪೂರವೇ ಹರಿದು ಬರುತ್ತಿದೆ. ಸಂಸ್ಕೃತ ಭಾರತೀ ಆವರಣದಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಇಲ್ಲಿ ನಿತ್ಯ ಕ್ರಿಕೆಟ್ ಆಡೋ ವಠಾರದ ಹುಡುಗರನ್ನ ನೋಡಿ ಸಂಸ್ಕೃತದಲ್ಲೇ ಕಾಮೆಂಟರಿ ಮಾಡಿದರೆ ಹೇಗೆ ಅಂತ ಮಾಡಿದ್ದೇವೆ ಎನ್ನುತ್ತಾರೆ ಸಂಸ್ಕೃತ ವಿದ್ವಾಂಸ ಲಕ್ಷ್ಮೀನಾರಾಯಣ.

ಪ್ರಧಾನಿ ಮೋದಿ ಪ್ರಶಂಸೆಗೆ ಸಂಸ್ಕೃತ ವಿದ್ಯಾರ್ಥಿಗಳ ಕೃತಜ್ಞತೆ

ಈ ಸಂಸ್ಕೃತದ ಕಾಮೆಂಟರಿ ವಿಡಿಯೋ ಟ್ವೀಟ್ ಮಾಡಿದ್ದನ್ನ ಪ್ರಧಾನಿ ಗುರುತಿಸಿ ರಿಟ್ವೀಟ್ ಮಾಡಿದ ನಂತರ ಈಗ ದೇಶದ ದಿಗ್ಗಜ ಕ್ರಿಕೆಟರ್​ಗಳಿಂದಲೂ ಸಂಸ್ಕೃತ ಕಾಮೆಂಟರಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ಪ್ರಧಾನಿ ರಿಟ್ವೀಟ್ ದೇಶದ ಮೂಲ ಭಾಷೆ ಸಂಸ್ಕೃತಕ್ಕೆ ಸಿಕ್ಕ ಜಯ ಎಂದು ಅಲ್ಲಿನ ವಿದ್ಯಾರ್ಥಿಗಳು ಸಹ ಖುಷಿಪಟ್ಟಿದ್ದಾರೆ.

ಮೋದಿ ರೀ ಟ್ವೀಟ್ ಬೆನ್ನಲ್ಲೇ ಲಕ್ಷಾಂತರ ಮಂದಿಯಿಂದ ವೀಕ್ಷಣೆ

ಈ ಸಂಸ್ಕೃತ ಕ್ರಿಕೆಟ್ ಕಾಮೆಂಟ್ರಿಯನ್ನ ಈವರೆಗೆ 7 ಲಕ್ಷದ 73 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಇದು ಸಂಸ್ಕೃತ ಭಾರತಿ ಸಂಸ್ಥೆಗೂ ಅಚ್ಚರಿ ಮೂಡಿಸಿದ್ದು, ಇಷ್ಟು ವೈರಲ್ ಆಗುವ ಬಗ್ಗೆ ನಿರೀಕ್ಷೆಯೇ ಇರಲಿಲ್ಲ. ದೇಶಾದ್ಯಂತ ಸದ್ದು ಮಾಡುತ್ತಿರೋದು ತುಂಬಾ ಖುಷಿ ಕೊಟ್ಟಿದೆ ಟಿವಿ9 ಜೊತೆ ಸಂಸ್ಕೃತ ವಿದ್ವಾಂಸ ಲಕ್ಷ್ಮಿ ನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಬೆಂಗಳೂರಿನ ಗಿರಿನಗರದ ಸಂಸ್ಕೃತಿ ಭಾರತೀ ಆವರಣದ ಸಂಸ್ಕೃತ ಕ್ರಿಕೆಟ್ ಕಾಮೆಂಟರಿ ದೇಶವ್ಯಾಪಿ ಸದ್ದು ಮಾಡುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಮೆಚ್ವುಗೆ ಮತ್ತಷ್ಟು ಖುಷಿ ಹೆಚ್ಚಿಗೆ ಮಾಡಿದೆ.

- Advertisement -

Related news

error: Content is protected !!