Thursday, May 9, 2024
spot_imgspot_img
spot_imgspot_img

ಬೆಟ್ಟಂಪಾಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ ರೋವರ್ಸ್ ಮತ್ತು ರೇಂಜರ್ಸ್ ಘಟಕದಿಂದ “ಬೀಜೋತ್ಸವ” ಕಾರ್ಯಕ್ರಮ

- Advertisement -G L Acharya panikkar
- Advertisement -

ಪುತ್ತೂರು: ದಿನಾಂಕ 7/ 06 /2022 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ರೋವರ್ಸ್ ಮತ್ತು ರೇಂಜರ್ಸ್ ಘಟಕ ಮತ್ತು ಕರ್ನಾಟಕ ಅರಣ್ಯ ಇಲಾಖೆ ಪುತ್ತೂರು ಘಟಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಬೀಜೋತ್ಸವ ಕಾರ್ಯಕ್ರಮವನ್ನು ಪಾರ ಅರಣ್ಯಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಪರಿಸರಕ್ಕೆ ಉಪಯುಕ್ತವಾದ ಹಣ್ಣಿನ ಬೀಜಗಳನ್ನು ಮತ್ತು ಈ ಮೊದಲೇ ತಯಾರಿಸಿದ ಬೀಜದುಂಡೆಗಳನ್ನು ಸಂಗ್ರಹಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಇವರು ವಿಶ್ವ ಪರಿಸರ ದಿನದ ಪ್ರಾಮುಖ್ಯತೆಯನ್ನು ಮತ್ತು ಬೀಜೋತ್ಸವದ ಉದ್ದೇಶಗಳನ್ನು ತಿಳಿಸಿದರು. ಹಿಂದಿನ ಕಾಲದಲ್ಲಿ ಪ್ರಾಣಿ-ಪಕ್ಷಿಗಳು ಬೀಜ ಪ್ರಸರಣ ಕ್ರಿಯೆಯನ್ನು ನಡೆಸುತ್ತಿದ್ದವು. ಇಂದು ಮನುಷ್ಯರ ಅಜಾಗರುಕತೆಯಿಂದ ಪರಿಸರ ನಾಶವಾಗಿ ಅಸಮತೋಲನ ಉಂಟಾಗಿ ಇಂದು ಕೃತಕವಾಗಿ ಕಾಡನ್ನು ಬೆಳೆಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ, ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಗುತ್ತು ಅವರು ಶುಭ ಹಾರೈಸಿದರು. ಡಾ. ಪೊಡಿಯ ರೋವರ್ ಸ್ಕೌಟ್ ಲೀಡರ್ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ರೇಂಜರ್ ಗೈಡ್ ಲೀಡರ್ ಮಂಜುಳಾದೇವಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ರೋವರ್ ಸ್ಕೌಟ್ ಲೀಡರ್ ತಿಮ್ಮಯ್ಯ ಎಲ್.ಎಂ. ಅವರು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯದಾಗಿ ತೃತೀಯ ಬಿಎಸ್ಸಿ ಅರ್ಚನ ಇವರು ವಂದಿಸಿದರು. ಕಾರ್ಯಕ್ರಮವನ್ನು ತೃತೀಯ ಬಿಎಸ್ಸಿ ತನ್ವಿ ಪಿ ಇವರು ನಿರೂಪಿಸಿದರು. ವಿದ್ಯಾರ್ಥಿಗಳು ಈ ಮೊದಲೇ ತಯಾರಿಸಿದ ಬೀಜದುಂಡೆಗಳನ್ನು ಮತ್ತು ಹಣ್ಣಿನ ಬೀಜಗಳು ಆಸಕ್ತಿಯಿಂದ ಬಿತ್ತನೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

- Advertisement -

Related news

error: Content is protected !!