Friday, June 5, 2026
spot_imgspot_img
spot_imgspot_img

ಬೆಳ್ತಂಗಡಿಯ ಯುವಕ ಬಹರೈನ್ ನಲ್ಲಿ ಸಾವು; ಪತ್ನಿ ಜೊತೆ ಫೋನಿನಲ್ಲಿ ಮಾತಾನಾಡುತ್ತಿರುವಾಗ ಹೃದಯಾಘಾತ

- Advertisement -
- Advertisement -

ಬೆಳ್ತಂಗಡಿ; ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತವಾಗಿ ಬೆಳ್ತಂಗಡಿ ಮೂಲದ ಯುವಕನೋರ್ವ ಬಹರೈನ್ ನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇಬ್ರಾಹಿಂ ನಾವೂರು(34) ಮೃತ ಯುವಕ. ಇವರು ಒಂದೂವರೆ ವರ್ಷದ ಹಿಂದೆ ಸುನ್ನತ್ ಕೆರೆಯ ಯುವತಿಯ ಜೊತೆ ವಿವಾಹವಾಗಿದ್ದರು. ದಂಪತಿಗಳಿಗೆ ಪುಟ್ಟ ಮಗು ಕೂಡ ಇದೆ.

ನಿನ್ನೆ ರಾತ್ರಿ ಪತ್ನಿಯ ಜೊತೆ ಫೋನ್ ನಲ್ಲಿ ಮಾತನಾಡಿದ್ದ ಇಬ್ರಾಹಿಂಗೆ ದಿಢೀರ್ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ವೇಳೆ ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.

- Advertisement -

Related news

error: Content is protected !!