Sunday, May 19, 2024
spot_imgspot_img
spot_imgspot_img

ಬೆಳ್ತಂಗಡಿ: ಅಕ್ರಮ ಮರಳು ಅಡ್ಡೆಗೆ ಪೊಲೀಸ್ ದಾಳಿ; ಡ್ರೆಜ್ಜಿಂಗ್ ಮಿಷನ್, ಹಿಟಾಚಿ, 4 ಟಿಪ್ಪರ್ ವಶಕ್ಕೆ

- Advertisement -G L Acharya panikkar
- Advertisement -
driving

ಬೆಳ್ತಂಗಡಿ: ನೇತ್ರಾವತಿ ನದಿಯಿಂದ ಅಕ್ರಮವಾಗಿ ಡ್ರೆಜ್ಜಿಂಗ್ ಮೂಲಕ ಮರಳು ತೆಗೆಯುತ್ತಿದ್ದ ಅಡ್ಡೆಗೆ ಧರ್ಮಸ್ಥಳ ಪೊಲೀಸ್‌ ಉಪನಿರೀಕ್ಷಕರ ಕೃಷ್ಣಕಾಂತ್ ಎ. ಅವರ ತಂಡ ದಾಳಿ ನಡೆಸಿರುವ ಘಟನೆ ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿ ನಡೆದಿದೆ.

ಸಂದೇಶ ಮತ್ತು ಜಗದೀಶ ಎಂಬುವರು ಅಕ್ರಮವಾಗಿ ಮರಳು ತೆಗೆದು ಸಾಗಾಟಮಾಡುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಮರಳು ತೆಗೆಯುತ್ತಿದ್ದವರು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಡ್ರೆಜ್ಜಿಂಗ್ ಮಿಷನ್ -1 ಮತ್ತು ನದಿ ತೀರದಲ್ಲಿ ಹಿಟಾಚಿ-1 ಹಾಗೂ ಮರಳು ತುಂಬಿದ 4 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ನದಿಯಿಂದ ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ ಅಂದಾಜು 39,00,000 ಲಕ್ಷ ರೂ. ಮತ್ತು ಮರಳಿನ ಅಂದಾಜು ಮೌಲ್ಯ 16,000 ರೂ. ಸೊತ್ತುಗಳ ಸ್ವಾಧೀನ ಪಡಿಸಲಾಗಿದೆ.

- Advertisement -

Related news

error: Content is protected !!