Sunday, June 14, 2026
spot_imgspot_img
spot_imgspot_img

ಈ ತೀರ್ಪು ರಾಮನ ಮೂಲಕ ಹಿಂದೂ ಸಮಾಜಕ್ಕೆ ಸಿಕ್ಕಿರುವಂತಹ ಜಯ: ಶಾಸಕ ಹರೀಶ್ ಪೂಂಜ

- Advertisement -
- Advertisement -

ಬೆಳ್ತಂಗಡಿ: ಹಿಂದೂ ಸಮಾಜ ಹಾಗೂ ಶ್ರೀರಾಮ ಜನ್ಮ ಸ್ಥಳವನ್ನು ಉಳಿಸಬೇಕೆಂಬ ಹೋರಾಟವನ್ನು ನಡೆಸಿದಂತಹ ಹೋರಾಟಗಾರರ ಮೇಲಿದ್ದಂತಹ ಆರೋಪ ಖುಲಾಸೆ ಆಗಿರುವುದು ಶ್ರೀರಾಮನ ಮೂಲಕ ಹಿಂದೂ ಸಮಾಜಕ್ಕೆ ಸಿಕ್ಕಿರುವಂತಹ ಜಯ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ  ಮಾತನಾಡಿದ ಅವರು, ಕೋಟ್ಯಂತರ ಹಿಂದೂ ಸಂಘಟನೆಗಳು ರಾಮನ ಜನ್ಮ ಸ್ಥಳದಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದಾರೆ.

ಈ ವೇಳೆ ಕೆಲ ಆಕ್ರೋಶ ಭರಿತ ಸಂಘಟನೆಗಳು ಪ್ರತಿಭಟನೆ ಮಾಡಿ ಕಟ್ಟಡ ನೆಲಕ್ಕುರುಳಿಸಿದ್ದರು. ಆ ಸಮಯದಲ್ಲಿ ಕೆಲವು ಹಿಂದೂ ಮುಖಂಡರುಗಳು ಆರೋಪಿಗಳೆಂದು ಬಿಂಬಿಸಿ ಅವರ ಮೇಲೆ ಮೊಕದ್ದಮೆ ಹಾಕಲಾಗಿತ್ತು. ಇದೀಗ ಎಲ್ಲಾ ಹಿಂದೂ ಮುಖಂಡರು ಖುಲಾಸೆಯಾಗಿದ್ದು ಸ್ವಾಗತಾರ್ಹ ಎಂದರು.

- Advertisement -

Related news

error: Content is protected !!