Saturday, April 20, 2024
spot_imgspot_img
spot_imgspot_img

ಬೆಳ್ತಂಗಡಿ: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ; ಮನನೊಂದು ಆತ್ಮಹತ್ಯೆಗೆ ಯತ್ನ; ಪೋಕ್ಸೋ ಪ್ರಕರಣ ದಾಖಲು

- Advertisement -G L Acharya panikkar
- Advertisement -

ಬೆಳ್ತಂಗಡಿ: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಅಪ್ರಾಪ್ತ ಯುವತಿಗೂ ಕಳೆಂಜ ಗ್ರಾಮದ ಯುವಕನಿಗೂ ಕಳೆದ ಕೆಲವು ತಿಂಗಳುಗಳಿಂದ Instagram ಮೂಲಕ ಪರಿಚಯವಾಗಿತ್ತು. ಬಳಿಕ ಆಕೆಯ ದೂರವಾಣಿ ನಂಬರ್ ಪಡೆದು ಆಕೆಯೊಂದಿಗೆ ಚಾಟ್ ನಡೆಸುತ್ತಿದ್ದು, ನಂತರ ದಿನಗಳಲ್ಲಿ ಪರಿಚಯ ಪ್ರೀತಿಯಾಗಿ, ಆಕೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಎರಡು ಬಾರಿ ಲೈಂಗಿಕವಾಗಿಯೂ ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಇವರಿಬ್ಬರ ದೂರವಾಣಿ ಚಾಟ್ ಆಕೆಯ ಸಂಬಂಧಿಕರಿಗೆ ತಿಳಿದು, ಆತನಿಗೆ ಗದರಿಸಿದ್ದರು ಎನ್ನಲಾಗಿದೆ. ಬಳಿಕ ಆತ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ ಎನ್ನಲಾಗಿದೆ. ಮನನೊಂದ ಯುವತಿ ಅ.20ರಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮನೆಯವರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಯಾನಂದ ಎಂಬಾತನ ವಿರುದ್ದ ಇದೀಗ ಪೋಕ್ಸೋ ಪ್ರಕರಣ ದಾಖಲಾಗಿದೆ.

vtv vitla
- Advertisement -

Related news

error: Content is protected !!