Wednesday, June 24, 2026
spot_imgspot_img
spot_imgspot_img

ಬೆಳ್ತಂಗಡಿ: ಕ್ಷುಲ್ಲಕ ಕಾರಣದಿಂದ ವೈಮನಸ್ಸು; ತಂಡದಿಂದ ವ್ಯಕ್ತಿಗೆ ಹಲ್ಲೆ

- Advertisement -
- Advertisement -
vtv vitla
vtv vitla

ಕಡಿರುದ್ಯಾವರ: ಕ್ಷುಲ್ಲಕ ಕಾರಣದಿಂದ ತಕರಾರು ನಡೆದು ವ್ಯಕ್ತಿಯೋರ್ವರಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಫೆ.2 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಕಡಿರುದ್ಯಾವರ ಗ್ರಾಮದ ಕೊಂಬರೋಡಿ ಮನೆಯ ಐತಪ್ಪ ನಳಿಕೆ ಯವರ ಪುತ್ರ ಬಾಬಿ ಎಂಬವರು ಹಲ್ಲೆಗೊಳಗಾದವರು.

ಬಾಬಿ ರವರು ಫೆ.27 ರಂದು ತಮ್ಮ ನೆರೆಮನೆಯಲ್ಲಿ ವಾಸವಿರುವ ಯುವತಿಯನ್ನು ಮನೆಯವರ ಒಪ್ಪಿಗೆಯ ಮೇರೆಗೆ ಸೋಮಂತಡ್ಕ ಆಕೋಟೆಕಟ್ಟೆ ಎಂಬಲ್ಲಿ ಬೂತಕೋಲ ಕಾರ್ಯಕ್ರಮಕ್ಕೆಂದು ತನ್ನ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಪ್ರಯಾಣಿಸುತ್ತಿದ್ದ ವೇಳೆ ತನ್ನ ಪರಿಚಯಸ್ಥರಾದ ದಿನೇಶ್, ಅಮ್ಮು @ ಯಶೋದರ, ಸತೀಶ್ ಸೇರಿದಂತೆ 10-15 ಜನರ ತಂಡ ಮಠ ಎಂಬಲ್ಲಿ ಬೈಕನ್ನು ತಡೆದು ನಿಲ್ಲಿಸಿ ಅವಾಚ್ಯ ಮಾತಿನಿಂದ ನಿಂದಿಸಿದ್ದಾರೆ.

ಅಲ್ಲದೆ ತನ್ನ ಮೇಲೆ ಹಲ್ಲೆ ನಡೆಸಿರುವ ಕಾರಣ ಗಂಭೀರ ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

- Advertisement -

Related news

error: Content is protected !!