Wednesday, April 24, 2024
spot_imgspot_img
spot_imgspot_img

ಬೆಳ್ತಂಗಡಿ: ತಾಯಿಯ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಸುಳ್ಳು ಸುದ್ಧಿ ಹಬ್ಬಿಸಿದ ಕಿಡಿಗೇಡಿಗಳು; FIR ದಾಖಲು!

- Advertisement -G L Acharya panikkar
- Advertisement -

ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ಲಾಯಿಲದ ಯುವಕನ ಮೇಲೆ ಅಶ್ಲೀಲವಾಗಿ ಅಪಪ್ರಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಾಯಿಲ ಸಮೃದ್ಧಿ ನಿವಾಸದ ಸುಶಾನ್ ಚಂದ್ರ ಎಂಬ ಯುವಕನ ಬಗ್ಗೆ ಇತ್ತೀಚೆಗಷ್ಟೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಕಿಡಿಗೇಡಿಗಳು ರವಾನಿಸಿದ್ದರು.

ಲಾಯಿಲ ಗ್ರಾಮದಲ್ಲಿ ಯುವಕನೋರ್ವ ತನ್ನ ತಾಯಿಯನ್ನು ನಿರಂತರವಾಗಿ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿ ಪರಾರಿಯಾಗಿದ್ದಾನೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.

ಈ ವಿಕೃತ ಕಾಮಿಯ ಹೆಸರು ಸುಶನ್ ಚಂದ್ರ 56 ಅಡಿ ಎತ್ತರವಿದ್ದು, ಗುಂಗುರು ಕೂದಲು ಹೊಂದಿರುತ್ತಾನೆ. ಎಲ್ಲಿಯಾದರೂ ಕಂಡರೆ ದಯಮಾಡಿ ಕೆಳಗಿನ ನಂಬರಿಗೆ ಕರೆಮಾಡಬೇಕಾಗಿ ವಿನಂತಿ ಎಂದು ದೂರವಾಣಿ ಸಂಖ್ಯೆ ನೀಡುವುದರೊಂದಿಗೆ ಅಪಪ್ರಚಾರ ಮಾಡಲಾಗಿದೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.

ಆ ಯುವಕನಿಗೆ ಮತ್ತು ಆತನ ಮನೆಯವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾನೆ.ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!