Thursday, June 18, 2026
spot_imgspot_img
spot_imgspot_img

ಬೆಳ್ತಂಗಡಿ: ತೋಡಿನ ನೀರಿಗೆ ಅಕ್ರಮ ವಿದ್ಯುತ್ ಸಂಪರ್ಕ ನೀಡಿದ ಪ್ರಕರಣ; ಆರೋಪಿ ಅರೆಸ್ಟ್!

- Advertisement -
- Advertisement -

ಬೆಳ್ತಂಗಡಿ: ಪಂಪ್ ಶೆಡ್ಡಿನಿಂದ ಕೇಬಲ್ ಮೂಲಕ ಹರಿಯುವ ನೀರಿಗೆ ವಿದ್ಯುತ್ ಸಂಪರ್ಕ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಳದಂಗಡಿ ಸಮೀಪದ ಬಡಗಕಾರಂದೂರು ಗ್ರಾಮದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಸವೇರಾ ಪಿರೇರಾ(45) ಬಂಧಿತ ಆರೋಪಿಯಾಗಿದ್ದಾನೆ.

ಅರೋಪಿ ಸವೇರಾ ಪಿರೇರಾ ತನ್ನ ಪಂಪ್ ಶೆಡ್ ನಿಂದ ಅಕ್ರಮವಾಗಿ ತಂತಿಗಳ ಮೂಲಕ ಅದನ್ನು ಸಮೀಪದಲ್ಲೇ ಹರಿಯುವ ನೀರಿಗೆ ಕರೆಂಟ್ ಸಂಪರ್ಕಿಸಿ ಮೀನು ಹಿಡಿಯಲು ಹೊರಟಿದ್ದಾನೆ. ಸ್ಥಳೀಯರು ಇದರ ಅರಿವು ಇಲ್ಲದೇ ಮೀನು ಹಿಡಿಯಲು ಹೋಗಿದ್ದಾರೆ. ದಿನಾಂಕ ಜೂನ್.13 ರಂದು ಜಾನ್ ಡಿಸೋಜಾ ಎಂಬವರು ಬಡಗಕಾರಂದೂರು ಗ್ರಾಮದ ಅಳದಂಗಡಿ ಎಂಬಲ್ಲಿರುವ ನಮನ ಡಾಬಾದ ಸಮೀಪದಲ್ಲಿರುವ ನೀರಿನ ಹಳ್ಳಕ್ಕೆ ಮೀನು ಹಿಡಿಯಲು ಹೋದಾಗ ಅವರಿಗೆ ಕರೆಂಟ್ ಪ್ರವಹಿಸುವ ಅನುಭವವಾಗಿದ್ದು, ಆತಂಕಗೊಂಡು ಅವರು ಮರುದಿನ ಅಳದಂಗಡಿ ಮೆಸ್ಕಾಂ ಇಂಜಿನಿಯರ್, ಲೈನ್ ಮ್ಯಾನ್ ,ಕಾರ್ಯಪಾಲಕ ಇಂಜಿನಿಯರ್ ಅವರ ಗಮನಕ್ಕೆ ತಂದಿದ್ದಾರೆ. ಆರೋಪಿಯ ಮೇಲೆ ಹಲವು ಕ್ರಿಮಿನಲ್ ಕೇಸುಗಳಿದ್ದು, ಮೂರು ವರ್ಷದ ಹಿಂದೆ ತನ್ನ ವೃದ್ಧ ತಂದೆ ತಾಯಿಗೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!