Saturday, June 6, 2026
spot_imgspot_img
spot_imgspot_img

ಬೆಳ್ತಂಗಡಿ: ನೀರು ಸೇದುವ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಕುವೆಟ್ಟು: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮಂಜುಬೆಟ್ಟು ಎಂಬಲ್ಲಿ ಮೂರ್ಚೆ ರೋಗದಿಂದ ಬಳಲುತ್ತಿದ್ದ ಬಂದಾರು ಗ್ರಾಮದ ನೇರೊಳ್ದ ಪಲ್ಕೆ ನಿವಾಸಿ ಬಾಬು ಎಂಬವರು ಬಾವಿಯಿಂದ ನೀರು ಸೇದುವ ವೇಳೆ ಮೂರ್ಚೆ ತಪ್ಪಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಅ.20ರಂದು ನಡೆದಿದೆ.

ಬಂದಾರು ಗ್ರಾಮದ ನೇರೋಳ್ದ ಪಲ್ಕೆ ನಿವಾಸಿ ಚರುಂಬೆ ಮತ್ತು ದಿ.ಸಗುಣ ಎಂಬವರ ಪುತ್ರ ಬಾಬು(34) ಎಂಬಾತ ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದರು. ಬಾಬು ಹಾಗೂ ಅವರ ತಾಯಿ ಕುವೆಟ್ಟು ಗ್ರಾಮದ ಮಂಜುಬೆಟ್ಟು ಎಂಬಲ್ಲಿರುವ ತನ್ನ ದೊಡ್ಡಮ್ಮನ ಮನೆಗೆ ಹೋಗಿದ್ದ ವೇಳೆ , ಅ.20ರಂದು ಬೆಳಿಗ್ಗೆ 11.30ಕ್ಕೆ ಬಾಬು ದೊಡ್ಡಮ್ಮನ ಮನೆಯಲ್ಲಿ ಬಾವಿಯಿಂದ ನೀರು ಸೇದುವ ಸಂದರ್ಭ ಮೂರ್ಚೆ ರೋಗದಿಂದ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!