Friday, June 19, 2026
spot_imgspot_img
spot_imgspot_img

ಬೆಳ್ತಂಗಡಿ: ಫಾಲ್ಸ್‌ನಲ್ಲಿ ಎಂಜಾಯ್‌ ಮಾಡಲು ಹೋದ ವಿದ್ಯಾರ್ಥಿಗಳ ತಂಡ; ನೀರಿನಲ್ಲಿ ಮುಳುಗಿ ಓರ್ವ ಸಾವು

- Advertisement -
- Advertisement -

ಬೆಳ್ತಂಗಡಿ: ಮಿತ್ತಬಾಗಿಲು ಎರ್ಮಾಯಿ ಫಾಲ್ಸ್ ನಲ್ಲಿ ಸ್ನಾನಕ್ಕೆ ಇಳಿದಿದ್ದ ‌ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಎಂಬವರ ಪುತ್ರ ಉಜಿರೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿವೇಕ್ ಮೃತಪಟ್ಟ ವಿದ್ಯಾರ್ಥಿ.

ಶನಿವಾರ ಮಧ್ಯಾಹ್ನ ನಂತರ ಕಾಲೇಜಿಗೆ ರಜೆ ಇದ್ದುದರಿಂದ ತನ್ನ ಸ್ನೇಹಿತರ ಜೊತೆ ಮಿತ್ತಬಾಗಿಲು ಗ್ರಾಮದ ಏಳೂವರೆ ಹಳ್ಳ ಎರ್ಮಾಯಿ ಫಾಲ್ಸ್ ಗೆ‌ ಹೋಗಿ, ತೊಟ್ಲ್ಯಾಯಿ ಗುಂಡಿಯಲ್ಲಿ ಸ್ನಾನಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಈ ವೇಳೆ ಅವಘಡ ಸಂಭವಿಸಿದೆ.

- Advertisement -

Related news

error: Content is protected !!