Saturday, April 20, 2024
spot_imgspot_img
spot_imgspot_img

ಬೆಳ್ತಂಗಡಿ: ಬ್ಯಾನರ್‌ ಹರಿದ ಪ್ರಕರಣ; ಮಕ್ಕಳ ಸಹಿತ ಪೋಷಕರಿಂದ ಕ್ಷೇತ್ರಕ್ಕೆ ಬಂದು ಕ್ಷಮೆಯಾಚನೆ

- Advertisement -G L Acharya panikkar
- Advertisement -
vtv vitla

ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟದ ಬ್ಯಾನರ್ ಹರಿದ ಪ್ರಕರಣಕ್ಕೆ ತಿರುವು ದೊರತಿದೆ.

ಸ್ಥಳೀಯ ನಿವಾಸಿಗಳಾದ ಮೂವರು ಅಪ್ರಾಪ್ತ ಮಕ್ಕಳು ಆಟವಾಡುತ್ತ ಈ ಕೃತ್ಯ ನಡೆಸಿದ್ದು, ಈ ಬಗ್ಗೆ ಪೋಷಕರ ಸಹಿತ ಮಕ್ಕಳು `ಮರೋಡಿಯ ಪೊಸರಡ್ಕ ಕ್ಷೇತ್ರಕ್ಕೆ ಬಂದು ತಪ್ಪು ಕಾಣಿಕೆಯನ್ನು ಸಲ್ಲಿಸಿ ತಪ್ಪೊಪ್ಪಿಕೊಂಡಿದ್ದಾರೆ.

ಬ್ಯಾನರ್ ಹರಿದ ಪ್ರಕರಣ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದಲ್ಲದೇ ಸ್ಥಳೀಯರು ಹಾಗೂ ಯಕ್ಷ ಬಳಗ ಯಾರೇ ಕೃತ್ಯವನ್ನು ಎಸಗಿದ್ದರೂ 24 ಗಂಟೆಯೊಳಗಾಗಿ ಕ್ಷೇತ್ರಕ್ಕೆ ಬಂದು ತಪ್ಪುಕೊಳ್ಳಬೇಕೆಂದು ಸೂಚಿಸಲಾಗಿತ್ತು, ಆದರೆ ಅಪ್ರಾಪ್ತರು ತಿಳಿಯದೆ ಈ ಕೃತ್ಯವನ್ನು ಎಸಗಿದ್ದಾರೆ.

ಅವರ ತಪ್ಪನ್ನು ಮನ್ನಿಸಬೇಕೆಂದು ವಿನಂತಿಸಿ ಮಕ್ಕಳು ಹಾಗೂ ಪೋಷಕರು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ, ಪೊಸರಡ್ಕ ಶ್ರೀ ದೈವ ಕೊಡಮಣಿತ್ತಾಯ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಯಕ್ಷಗಾನ ಆ‍ಯೋಜಕರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ, ಪ್ರಾರ್ಥಿಸಲಾಯಿತು.

- Advertisement -

Related news

error: Content is protected !!