Sunday, June 7, 2026
spot_imgspot_img
spot_imgspot_img

ಬೆಳ್ತಂಗಡಿ ರಕ್ಷಿತ್‌ ಶಿವರಾಂ ಕಾಂಗ್ರೆಸ್‌ ಅಭ್ಯರ್ಥಿ…? ಅಸ್ತು ಅನ್ನುತ್ತಾ ಹೈಕಮಾಂಡ್‌

- Advertisement -
- Advertisement -

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಬಿ.ಜೆ.ಪಿಯಲ್ಲಿ ಹಾಲಿ ಶಾಸಕ ಹರೀಶ್ ಪೂಂಜರೇ ಮುಂದಿನ ಅಭ್ಯರ್ಥಿಯಾಗಲಿದ್ದು, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಲ್ಲಿ ತೀವ್ರ ಪೈಪೋಟಿ ನಡೆದಿದ್ದು ಮಾಜಿ ಶಾಸಕರುಗಳು ಮತ್ತು ಯುವ ನಾಯಕ ಸೇರಿ ಮೂವರು ಪಕ್ಷಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ಇದೀಗ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಯುವ ನಾಯಕ ರಕ್ಷಿತ್ ಶಿವರಾಂ ಅವರೇ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎನ್ನಲಾಗುತ್ತಿದ್ದು, ಅವರಿಗೆ ಹೈಕಮಾಂಡ್ ಬುಲಾವ್ ನೀಡಿರುವುದಾಗಿ ತಿಳಿದುಬಂದಿದೆ.

ಜನಪರ ಯೋಜನೆಗಳ ಮೂಲಕ ತಾಲೂಕಿನಲ್ಲಿ ಹೊಸ ಅಭಿವೃದ್ಧಿಯ ಶಕೆಯನ್ನೇ ಆರಂಭಿಸಿ ಬೆಳ್ತಂಗಡಿ ತಾಲೂಕಿನ ಜನರ ಮನೆಮಾತಾಗಿರುವ ಹಾಲಿ ಶಾಸಕ ಹರೀಶ್ ಪೂಂಜರವರು ಬಿಜೆಪಿ ಅಭ್ಯರ್ಥಿಯಾಗಿ ಒಂದೆಡೆಯಾದರೆ.

ಬೆಸ್ಟ್ ಫೌಂಡೇಶನ್ ಮೂಲಕ ಬೆಳ್ತಂಗಡಿ ತಾಲೂಕಿನಲ್ಲಿ ಸಮಾಜ ಸೇವೆ ಮಾಡುತ್ತಿರುವ ಯುವ ನಾಯಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ರಕ್ಷಿತ್ ಶಿವರಾಂ ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದ್ದು, ಬೆಳ್ತಂಗಡಿ ತಾಲೂಕಿನ ಚುನಾವಣಾ ಕಣವು ರಂಗೇರುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

- Advertisement -

Related news

error: Content is protected !!