Wednesday, July 9, 2025
spot_imgspot_img
spot_imgspot_img

ಬೆಳ್ತಂಗಡಿ: ವಿವಾಹಿತ ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿ ಪೊಲೀಸ್ ವಶಕ್ಕೆ

- Advertisement -
- Advertisement -
vtv vitla
vtv vitla

ಬೆಳ್ತಂಗಡಿ: ವಿವಾಹಿತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿ, ಜೀವ ಬೆದರಿಕ ಹಾಕಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ದೇಸೊಟ್ಟು ಎಂಬಲ್ಲಿ ನಡೆದಿದೆ. ಇಂದಬೆಟ್ಟು ಗ್ರಾಮದ ಲಿಂಗತ್ಯಾರ್ ನಿವಾಸಿ ಸಂತೋಷ್@ಸಂತು (25) ಬಂಧಿತ ಆರೋಪಿ.

ಇದನ್ನೂ ಓದಿ: ಪ್ರಾರ್ಥನಾ ಕೇಂದ್ರ ಧ್ವಂಸ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಅಂಗನವಾಡಿ ಇದ್ದ ಕಟ್ಟಡ ಹೇಗೆ ಪ್ರಾರ್ಥನಾಲಯವಾಯಿತು..?

45 ವರ್ಷದ ವಿವಾಹಿತ ಮಹಿಳೆ ತನ್ನ ಮನೆಯ ಸಮೀಪದ ಗುಡ್ಡಕ್ಕೆ ಕಟ್ಟಿಗೆ ತರಲು ಹೋದಾಗ ಯುವಕನೊಬ್ಬ ಮಹಿಳ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದಾನೆ. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ತನ್ನ ಮನೆಯ ಸಮೀಪದ ಗುಡ್ಡೆಗೆ ಕಟ್ಟಿಗೆ ತರಲು ಹೋಗಿದ್ದು, ಕಟ್ಟಿಗೆಯನ್ನು ಕತ್ತಿಯಿಂದ ಕಡಿಯುತ್ತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸಂತೋಷ್ ಕೋಲು ತುಂಡು ಮಾಡುಲು ಕತ್ತಿ ಬೇಕಾಗಿದ್ದು ಸ್ವಲ್ಪ ಕತ್ತಿಯನ್ನು ಕೊಡಿ ಎಂಬುದಾಗಿ ಮಹಿಳೆಯ ಬಳಿ ಕೇಳಿದ್ದಾನೆ.

ಮಹಿಳೆ ಕತ್ತಿ ನೀಡಲು ನಿರಾಕರಿಸಿದಾಗ ಪರಿಪರಿಯಾಗಿ ಕೇಳಿಕೊಂಡಿದ್ದಾನೆ. ಕತ್ತಿಯನ್ನು ಪಡೆದುಕೊಂಡ ಸಂತೋಷನು ಕೋಲನ್ನು ತುಂಡು ಮಾಡಿದಂತೆ ಮಾಡಿ ಸುತ್ತಮುತ್ತ ನೋಡುತ್ತಾ ಕತ್ತಿಯನ್ನು ಅಲ್ಲೇ ಬಿಸಾಕಿ ಮಹಿಳೆಯ ಹತ್ತಿರ ಬಂದು ಮಾನಭಂಗ ಮಾಡಲು ಮುಂದಾಗಿದ್ದಾನೆ. ಈ ವೇಳೆ ಮಹಿಳೆ ತನ್ನ ಆತ್ಮ ರಕ್ಷಣೆಗೆ ಕೈಗೆ ಕಚ್ಚಿ ಕಾಲಿನಿಂದ ತುಳಿದ್ದಾರೆ.

ಈ ಘಟನೆಯನ್ನು ದೂರದಿಂದ ನೋಡಿದ ಮಹಿಳೆಯ ಗಂಡ ಹತ್ತಿರ ಬರುತ್ತಿರುವುದನ್ನು ನೋಡಿ ಆರೋಪಿ ಸಂತೋಷನು ಮಹಿಳೆಯನ್ನು ಉದ್ದೇಶಿಸಿ “ಈ ವಿಷಯವನ್ನು ಬೇರೆ ಯಾರಲ್ಲಿಯಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ.” ಎಂದು ಬೇದರಿಕೆ ಓಡ್ಡಿ ಅಲ್ಲಿಂದ ಓಡಿ ಹೋಗಿರುತ್ತಾನೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಪೊಲೀಸರು 354(A),506 ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಸಂತೋಷ್ ನನ್ನು ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

Related news

error: Content is protected !!