Friday, June 19, 2026
spot_imgspot_img
spot_imgspot_img

ಸುಳ್ಯ: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಢಿಕ್ಕಿ; ಕಾರಿನ ಹಿಂಬದಿ ಸಂಪೂರ್ಣ ಜಖಂ..!

- Advertisement -
- Advertisement -

ಸುಳ್ಯ: ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಡಿರುವ ಘಟನೆ ಸುಳ್ಯ ಗಾಂಧಿನಗರ ಮಸೀದಿಯ ಮುಂಭಾಗದಲ್ಲಿ ನಡೆದಿದೆ.

ಗಾಂಧಿನಗರ ಪೆಟ್ರೋಲ್ ಬಂಕ್ ಮಾಲಕ ಮುಜೀಬ್ ರವರು ಬೆಳಗ್ಗೆ 5ರ ಸುಮಾರಿಗೆ ಮಸೀದಿಗೆ ಕಾರಿನಲ್ಲಿ ಬಂದಿದ್ದರು. ಕಾರನ್ನು ಮಸೀದಿಯ ಎದುರಿನ ರಸ್ತೆಯ ಇನ್ನೊಂದು ಬದಿಯಲ್ಲಿ ಗಾಂಧಿನಗರ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದರು.

ಸುಮಾರು 5.30ರ ವೇಳೆಗೆ ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆಯಿತು. ಢಿಕ್ಕಿಯಾದ ರಭಸಕ್ಕೆ ಕಾರು ಒಂದು ಸುತ್ತು ತಿರುಗಿ ಮತ್ತೆ ಸುಳ್ಯದ ಕಡೆ ಮುಖ ಮಾಡಿ ನಿಂತಿತು. ಈ ವೇಳೆ ಅಲ್ಲೆ ಇದ್ದ ಬೈಕ್ ಗೆ ಕಾರು ತಾಗಿತೆನ್ನಲಾಗಿದೆ. ಕಾರಿನ ಹಿಂಬದಿ ಸಂಪೂರ್ಣ ಜಖಂ ಗೊಂಡಿದೆ. ವಿಷಯ ತಿಳಿದು ಪೋಲೀಸರು ಸ್ಥಳಕ್ಕೆ ಆಗಮಿಸಿದರು.

- Advertisement -

Related news

error: Content is protected !!