Tuesday, April 30, 2024
spot_imgspot_img
spot_imgspot_img

ಬೆಳ್ತಂಗಡಿ: ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದರೋಡೆ ಪ್ರಕರಣ; ಆರೋಪಿ ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -

ಬೆಳ್ತಂಗಡಿ: ಮನೆಯಲ್ಲಿ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಮನೆಯ ಅಕ್ಕು(85) ಎಂಬವರು ಮನೆಯಲ್ಲಿ ಒಬ್ಬರೇ ಇದ್ದಾಗ ವ್ಯಕ್ತಿಯೊಬ್ಬ ಮನೆಗೆ ಬಂದು ಹಿಂಭಾಗದಲ್ಲಿದ್ದ ಅಜ್ಜಿಯ ತಲೆಯ ಹಿಂಭಾಗಕ್ಕೆ ಕಟ್ಟಿಗೆಯಿಂದ ಹೊಡೆದಿದ್ದಾನೆ. ನಂತರ ಅಕ್ಕುನ ಎರಡು ಕಿವಿಯಲ್ಲಿದ್ದ ಚಿನ್ನವನ್ನು ಎಳೆದಿದ್ದಾನೆ. ಬಳಿಕ ಮನೆಯೊಳಗೆ ಹೋಗಿ ಚೀಲದಲ್ಲಿ ಇದ್ದ ಸುಮಾರು 20,000 ಹಣವನ್ನು ದರೋಡೆ ಮಾಡಿ ಹೋಗಿದ್ದಾನೆ.

ಶಾಲೆಯಿಂದ ಸುಮಾರು 2 ಗಂಟೆಗೆ ಮನೆಗೆ ಮೊಮ್ಮಗಳಾದ ಮೌರ್ಯ ಬಂದಾಗ ಸುಮಾರು ಅಜ್ಜಿ ಕಾಣದಿದ್ದಾಗ ಸುತ್ತಮುತ್ತ ಹುಡುಕಾಟ ನಡೆಸಿದ್ದಾಳೆ. ಈ ವೇಳೆ ಮನೆಯ ಹಿಂಭಾಗದಲ್ಲಿ ತಲೆಗೆ ಗಾಯಗೊಂಡು ಬೊಬ್ಬೆ ಹಾಕುವುದನ್ನು ಕಂಡಿದ್ದಾಳೆ. ತಕ್ಷಣ ಪಕ್ಕದ ಮನೆಯ ಸಂಬಂಧಿ ಮಾಧವ ಎಂಬವರ ಮನೆಗೆ ಓಡಿ ವಿಷಯ ತಿಳಿಸಿದ್ದಾಳೆ. ಈ ವೇಳೆ ಮನೆಗೆ ಓಡಿ ಬಂದು ಅಕ್ಕು ಅವರನ್ನು ಆಸ್ಪತ್ರೆಗೆ ಸಾಗಿಸಲು ವಾಹನಕ್ಕೆ ಕರೆ ಮಾಡಿ ಕಾಯುತ್ತಿದ್ದಾಗ ಅಕ್ಕು ಅಸ್ವಸ್ಥತೆಯಿಂದ ರಕ್ತಸಾವ್ರವಾಗಿ ಮನೆಯ ಮುಂಭಾಗದಲ್ಲಿ 2:15 ರ ವೇಳೆಗೆ ಸಾವನ್ನಪ್ಪಿದ್ದಾರೆ.

ಮನೆಯವರಿಗೆ ಅಕ್ಕುನ ಕಿವಿ ಹರಿದಿದ್ದು ಗೊತ್ತಾಗಿದೆ. ನಂತರ ಮನೆಯನ್ನು ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಇಟ್ಟಿದ್ದ ಹಣ ನಾಪತ್ತೆಯಾಗಿರುತ್ತದೆ. ಇದರಿಂದ ಯಾರೋ ದರೋಡೆ ಮಾಡಲು ಬಂದವರು ಅಕ್ಕುನ ಮೇಲೆ ಹಲ್ಲೆ ಮಾಡಿ ಹೋಗಿರುವುದು ಅನುಮಾನ ಬರುತ್ತದೆ ನಂತರ ಈ ಮಾಹಿತಿಯನ್ನು ಧರ್ಮಸ್ಥಳ ಪೊಲೀಸರಿಗೆ ತಿಳಿಸಿದ್ದು ಧರ್ಮಸ್ಥಳ ಠಾಣೆಯ ಪಿಎಸ್‌ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು ನಂತರ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ಮಂಗಳೂರು ಎಫ್.ಎಸ್.ಎಲ್ ತಂಡದ ಡಿವೈಎಸ್ಪಿ ಗೌರೀಶ್ ತಂಡ ಬಂದು ಪರಿಶೀಲನೆ ನಡೆಸಿದ್ದು ಪೊಲೀಸ್ ನಾಯಿ ಆರೋಪಿಯ ಜಾಡು ಹಿಡಿದು ಮನೆಯಿಂದ ಒಳರಸ್ತೆಯಲ್ಲಿ ಸುಮಾರು 700 ಮೀಟರ್ ವರೆಗೆ ಹೋಗಿ ವಾಪಸ್ ಆಗಿದೆ. ಶವವನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಶವಪರೀಕ್ಷೆಗೆ ಸಾಗಿಸಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ನಡೆದ ಏಂಟು ಗಂಟೆ ಒಳಗೆ ಕೊಲೆ ಮಾಡಿದ ಸಂಬಂಧಿ ಯುವಕನನ್ನು ವಶಕ್ಕೆ ಪಡೆಯುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆ ನಡೆದ ಮನೆಯವರ ಹಿನ್ನಲೆ:

ಕೊಲೆಯಾದ ಅಕ್ಕು ಅವರ ಮನೆಯಲ್ಲಿ ಒಟ್ಟು ಆರು ಜನ ಇರುವುದು ಮಗ ಡೀಕಯ್ಯ ಸೊಸೆ ಲಲಿತಾ ಮೊಮ್ಮಗ ಪ್ರತೀಕ್, ಮೊಮ್ಮಗಳು ಮೌಲ್ಯ ಮತ್ತು ಅಕ್ಕು ಮಗಳೊಬ್ಬರು ಇಲ್ಲಿಯೇ ಇರುವುದು, ಪ್ರತೀಕ್ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಡೀಕಯ್ಯ, ಲಲಿತಾ, ಅಕ್ಕು ಮಗಳು ಸೇರಿ ಮೂರು ಜನರು ಸ್ಥಳೀಯರೊಬ್ಬ ಮನೆಯಲ್ಲಿ ಹಲವು ವರ್ಷಗಳಿಂದ ಕೂಲಿ ಕೆಲಸಕ್ಕೆ ಹೋಗುತ್ತಾರೆ ಮೊಮ್ಮಗಳು ಶಾಲೆಗೆ ಹೋಗುತ್ತಾಳೆ ಈ ವೇಳೆ ಅಕ್ಕು ಮಾತ್ರ ಮನೆಯಲ್ಲಿ ಇದ್ದು ಮನೆಕೆಲಸವನ್ನು ಎಲ್ಲಾ ಮಾಡುತ್ತಿದ್ದರು. ಕೊಲೆ ನಡೆದ ದಿನ ಅಕ್ಕು ಮನೆಯೊಳಗೆ ಊಟ ಮಾಡಲು ತಟ್ಟೆಗೆ ಊಟ ಹಾಕಿ ರೆಡಿ ಮಾಡಿದ್ದರು ಈ ವೇಳೆ ಕೊಲೆಯಾಗಿ ಹೋಗಿದ್ದಾರೆ.

ಪಕ್ಕದ ಮನೆಯ ಯುವಕನ ಸುಳಿವಿನಿಂದ ಆರೋಪಿ ವಶಕ್ಕೆ:

ಪಕ್ಕದ ಮನೆಯ ನಿವಾಸಿ ಬೇಬಿ ಎಂಬವರ ಮಗ ಸುದರ್ಶನ್ ಎಂಬಾತ ತನ್ನ ಮನೆಗೆ ಟಿಲ್ಲರ್ ಗೆ ಡೀಸೆಲ್ ತರಲು ಬೈಕ್ ನಲ್ಲಿ ಹೋಗಿ ವಾಪಸ್ ಮನೆಗೆ ಬರುವಾಗ ಯುವಕನೊಬ್ಬ ಅಕ್ಕು ಮನೆಯಿಂದ ನಡೆದು ಕೊಂಡು ಹೋಗಿರುವುದನ್ನು ನೋಡಿದ್ದಾನೆ. ಈ ವಿಚಾರ ಅಕ್ಕುನ ಮಗನಾದ ಡೀಕಯ್ಯ ಅವರಿಗೆ ಮಾಹಿತಿ ನೀಡಿದ್ದಾನೆ. ಆ ವ್ಯಕ್ತಿ ಅಕ್ಕು ಮಗ ಡೀಕಯ್ಯ ಅವರ ಹೆಂಡತಿಯ ಅಕ್ಕ ಮಗ ಅಶೋಕ್ ಆಗಿದ್ದ. ತಕ್ಷಣ ಆತನ ಮೊಬೈಲ್ ಗೆ ಡೀಕಯ್ಯ ಕರೆ ಮಾಡಿ ಎಲ್ಲಿದ್ದಿಯಾ ಎಂದಾಗ ನಾನು ನಾರಾವಿಯಲ್ಲಿ ಇದ್ದೇನೆ ಉತ್ತರಿಸಿದ್ದಾನೆ. ಅವಾಗ ಅನುಮಾನ ಬಂದು ಧರ್ಮಸ್ಥಳ ಠಾಣೆಯ ಪಿಎಸ್‌ಐ ಕೃಷ್ಣಕಾಂತ್ ಪಾಟೀಲ್ ಅವರಿಗೆ ಮೊಬೈಲ್ ಸಂಖ್ಯೆ ನೀಡಿದ್ದಾರೆ. ತಕ್ಷಣ ಎಚ್ಚೆತ್ತು ಮೊಬೈಲ್ ಮತ್ತೆ ಲೋಕೇಷನ್ ನೋಡಿದಾಗ ಉಜಿರೆಯಲ್ಲಿ ಬಂದಿದೆ. ನೋಡಿದಾಗ ಸೋಮಂದಡ್ಕದಲ್ಲಿ ಬಂದಿದೆ. ತಕ್ಷಣ ಎಚ್ಚೆತ್ತು ಮೊಬೈಲ್ ಲೋಕೇಷನ್ ನೋಡಿದಾಗ ಉಜಿರೆಯಲ್ಲಿ ಬಂದಿದೆ. ಮತ್ತೆ ನೋಡಿದಾಗ ಸೋಮಂದಡ್ಕದಲ್ಲಿ ಬಂದಿದೆ. ತಕ್ಷಣ ಧರ್ಮಸ್ಥಳ ಪೊಲೀಸ್ ಸಿಬ್ಬಂದಿ ಆಲರ್ಟ್ ಆಗಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.ಆತ ಕಂಠಪೂರ್ತಿ ಕುಡಿದು ಹೊಟೇಲ್ ನಲ್ಲಿ ಕುಳಿತಿದ್ದ. ಅಲ್ಲಿಂದ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಆರೋಪಿಯ ಹಿನ್ನಲೆ :

ಕೊಲೆ ಮಾಡಿ ದರೋಡೆ ಮಾಡಿದ ಆರೋಪಿ ಕಡಿರುದ್ಯಾವರ ಗ್ರಾಮದ ಕಾನರ್ಪದ ಕುಮೇರು ಮನೆಯ ಸುಂದರಿಯ ಅವಿವಾಹಿತ ಮಗ ಅಶೋಕ್(28) ಆಗಿದ್ದಾನೆ. ಈತ ಐಸ್ ಕ್ರೀಮ್ ವಾಹನದಲ್ಲಿ ಕೆಲಸ ಮಾಡಿಕೊಂಡಿದ್ದ. ಸಂಬಂಧಿಯಾಗಿದ್ದ ಕಾರಣ ಅಕ್ಕು ಮನೆಗೆ ಬಂದು ಹೋಗುತ್ತಿದ್ದ. ಈ ವೇಳೆ ಹಣ ಕೂಡ ಕೇಳಿ ಪಡೆದು ಹೋಗುತ್ತಿದ್ದ. ಈತನಿಗೆ ಕುಡಿಯುವ ಚಟ ಕೂಡ ಇದ್ದು, ಕೆಲ ಸಮಯದಿಂದ ಕೆಲಸ ಬಿಟ್ಟು ಮನೆಯಲ್ಲಿ ಇದ್ದು ಹಣ ಇಲ್ಲದ ಕಾರಣ ಸಂಬಂಧಿಕ ಅಜ್ಜಿಯನ್ನು ಕೊಲೆ ಮಾಡಿ ದರೋಡೆ ಮಾಡಿದ್ದಾನೆ. ಇದೇ ಹಣದಿಂದ ಮಜಾ ಮಾಡುವ ಮೊದಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

- Advertisement -

Related news

error: Content is protected !!