Thursday, May 2, 2024
spot_imgspot_img
spot_imgspot_img

ಬೆಳ್ತಂಗಡಿ: ಹತ್ಯೆಯಾದ ದಲಿತ ಯುವಕನ ಮನೆಗೆ ನ್ಯಾಷನಲ್ ದಲಿತ್ ಮೂವ್ಮೆಂಟ್ ಫಾರ್ ಜಸ್ಟಿಸ್ ನ ನಿಯೋಗ ಭೇಟಿ

- Advertisement -G L Acharya panikkar
- Advertisement -
vtv vitla
vtv vitla

ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ RSS , ಭಜರಂಗದಳದ ಕಾರ್ಯಕರ್ತ , ಬಿಜೆಪಿ ಮುಖಂಡ ಕೃಷ್ಣ @ ಕಿಟ್ಟ ಎಂಬಾತ ಕ್ಷುಲ್ಲಕ ಕಾರಣಕ್ಕಾಗಿ ಆದಿವಾಸಿ ಸಮುದಾಯದ ದಿನೇಶ್ ಎಂಬಾತನನ್ನು ಕೊಲೆ ಮಾಡಿದ ಘಟನೆಯನ್ನು ಖಂಡಿಸಿ , ನೊಂದ ಕುಟುಂಬಕ್ಕೆ ಸಾಂತ್ವನ ಹೇಳಲು ರಾಷ್ಟ್ರೀಯ ದಲಿತ ಮಾನವ ಹಕ್ಕುಗಳ ಆಂದೋಲನದ ಅಂಗಸಂಸ್ಥೆ ನ್ಯಾಷನಲ್ ದಲಿತ್ ಮೂವ್ಮೆಂಟ್ ಫಾರ್ ಜಸ್ಟಿಸ್ ನ ನಿಯೋಗ ಮನೆಗೆ ಭೇಟಿ ನೀಡಿತು.

ಈ ಸಂದರ್ಭದಲ್ಲಿ ಮನೆಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಜಸ್ಟಿಸ್ ನ ರಾಜ್ಯ ಕಾರ್ಯದರ್ಶಿ ಕೆಂಪನಪಾಳ್ಯ ಸಿದ್ದರಾಜು ಮನೆಯ ಆಧಾರಸ್ತಂಭವನ್ನು ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ದಿನೇಶ್ ಕೊಲೆಯಿಂದಾಗಿ ಕುಟುಂಬ ಬೀದಿಗೆ ಬಂದಂತಾಗಿದೆ. ಪ.ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ 2015 ರಂತೆ ಮೃತ ಕುಟುಂಬಕ್ಕೆ 8,25,000/- ತಕ್ಷಣ ಪರಿಹಾರ ನೀಡಬೇಕು. ಮೃತರ ಮಕ್ಕಳಿಗೆ ಉಚಿತ ಶಿಕ್ಷಣ , ಸೆಕ್ಷನ್ 21 ರಂತೆ ಉಚಿತ ಕಾನೂನು ನೆರವು ನೀಡಬೇಕು ಎಂದರು. 2016 ರ ತಿದ್ದುಪಡಿ ಪ್ರಕಾರ ಪ್ರಕರಣ 12(4) ರ ಕ್ರಮ ಸಂಖ್ಯೆ 46 ರಂತೆ ಮನೆಯ ಆಧಾರಸ್ತಂಭ , ಯಜಮಾನನ್ನು ಕಳೆದುಕೊಂಡ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು , ಕುಟುಂಬಕ್ಕೆ 2 ಎಕರೆ ಕೃಷಿ ಜಮೀನು ನೀಡಬೇಕೆಂದು ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಪರಿವರ್ತನಾ ಚಳವಳಿಯ ಮುಖಂಡರೂ , ದ.ಕ ಜಿಲ್ಲಾ ಮುಖಂಡರಾದ ಪಿ‌.ಡೀಕಯ್ಯ , ಸಂಶೋಧಕ ಡಾ‌. ಸಿದ್ದಾರ್ಥ್ ಬೆಂಗಳೂರು , ಸಿಪಿಐ(ಎಂ) ಮುಖಂಡರಾದ ಶೇಖರ್ ಲಾಯಿಲ ಉಪಸ್ಥಿತರಿದ್ದರು.

vtv vitla
- Advertisement -

Related news

error: Content is protected !!