Wednesday, July 2, 2025
spot_imgspot_img
spot_imgspot_img

ಬೆಳ್ತಂಗಡಿ: ಹಾಡುಹಗಲೇ ಗ್ರಾನೈಟ್ ಅಂಗಡಿಗೆ ನುಗ್ಗಿ, ಕ್ಯಾಶ್ ಕೌಂಟರ್ ಒಡೆದು ನಗದು ದೋಚಿದ ಕಳ್ಳರು..!

- Advertisement -
- Advertisement -

ಬೆಳ್ತಂಗಡಿ: ಹಾಡುಹಗಲೇ ಯಾರು ಇಲ್ಲದ ವೇಳೆ ಅಂಗಡಿಯೊಳಗೆ ನುಗ್ಗಿದ ಕಳ್ಳರು ಸುಮಾರು 50 ಸಾವಿರ ರೂ. ನಗದು ದೋಚಿರುವ ಘಟನೆ ಲಾಯಿಲ ಗ್ರಾಮದ ಕಾಶಿಬೆಟ್ಟಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಾಶಿಬೆಟ್ಟು ಭಗವಾನ್ ಶ್ರೀ ಶನೇಶ್ವರ ದೇವಸ್ಥಾನದ ಹಿಂಬದಿಯಲ್ಲಿರುವ ಕಿಶೋರ್ ಎಂಬವರ ಜಾಗವನ್ನು ಲೀಜ್ ಗೆ ಪಡೆದು, ರಾಜಸ್ಥಾನ ಮೂಲದ ರೂಪ್ ಕಿಶೋರ್ ಎಂಬವರು ಶ್ರೀ ರಾಮ್ ಗ್ರಾನೈಟ್ & ಟೈಲ್ಸ್ ಎಂಬ ಹೆಸರಿನ ಅಂಗಡಿಯಲ್ಲಿ ಒಂದು ವರ್ಷದಿಂದ ವ್ಯವಹಾರ ನಡೆಸುತ್ತಿದ್ದಾರೆ.

vtv vitla
vtv vitla

ಇಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ಅಂಗಡಿ ಮಾಲಕ ರೂಪ್ ಕಿಶೋರ್ ಉಜಿರೆಗೆ ಹೋಗಿದ್ದು, ಈ ವೇಳೆ ಅಂಗಡಿಯಲ್ಲಿ ಯಾರು ಇರಲ್ಲಿಲ್ಲ. ಹಣ ಇರುವ ಕೌಂಟರ್ ಬಾಕ್ಸ್ ಗೆ ಬೀಗ ಹಾಕಿ ಹೋಗಿದ್ದರು. ವಾಪಸ್ ಬಂದು ಕ್ಯಾಶ್ ಬಾಕ್ಸ್ ಓಪನ್ ಮಾಡಿದಾಗ ಹಣ ನಾಪತ್ತೆಯಾಗಿತ್ತು.

ಕಳ್ಳರು ಕ್ಯಾಶ್ ಕೌಂಟರಿಗೆ ಸ್ಕ್ರೂ ಡ್ರೈವರ್ ರೀತಿಯ ವಸ್ತು ಬಳಸಿ ಓಪನ್ ಮಾಡಿ ಸುಮಾರು 50 ಸಾವಿರದಿಂದ 55 ಸಾವಿರವರೆಗೆ ಹಣ ದೋಚಿದ್ದಾರೆ. ಮಾಲಕರು ನಂತರ ಅಲ್ಲಿಯೆ ಎದುರು ಇದ್ದ ಆಟೋ ಚಾಲಕನ ಬಳಿ ವಿಚಾರ ತಿಳಿಸಿದಾಗ ಆ ವೇಳೆ ಇಬ್ಬರು ವ್ಯಕ್ತಿಗಳು ಓಡಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಕೂಡಲೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಾಲಕ ಕಿಶೋರ್ ಮತ್ತು ರೂಪ್ ಕಿಶೋರ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Related news

error: Content is protected !!