Friday, May 17, 2024
spot_imgspot_img
spot_imgspot_img

ಬೆಳ್ಳಿಪ್ಪಾಡಿ: ಜಾಗದ ತಕರಾರು; ಶಾಸಕ ಸಂಜೀವ ಮಠಂದೂರು ವಿರುದ್ಧ ಕಿಡಿಕಾರಿದ ಹಲ್ಲೆಗೊಳಗಾದ ಮಹಿಳೆ..! ಐವರ ವಿರುದ್ಧ ಎಫ್‌ಐಆರ್ ದಾಖಲು

- Advertisement -G L Acharya panikkar
- Advertisement -

ಬೆಳ್ಳಿಪ್ಪಾಡಿಯ ಶಕುಂತಳಾ ರೈ ಎಂಬ ಮಹಿಳೆ ಜಾಗದ ತಕರಾರಿನ ವಿಚಾರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಸ್ವತಃ ಮಹಿಳೆಯೇ ಮಾಧ್ಯಮದೊಂದಿಗೆ ಮಾತನಾಡಿ ತಮಗಾದ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ. ನ್ಯಾಯ ಬೇಕೆಂದು ಕೋರ್ಟ್‌ ಮೆಟ್ಟಿಲೇರಿದಾಗ ಶಾಸಕ ಸಂಜೀವ ಮಠಂದೂರು ಅವರು ನಮ್ಮ ಪರವಾಗಿ ನ್ಯಾಯ ಬರಬಾರದು ಎಂದು ಒತ್ತಡ ಹೇರಿದ್ದಾಗಿ ಆರೋಪ ಮಾಡಿದ್ದಾರೆ.

ನಮಗೆ ಬೆಳ್ಳಿಪ್ಪಾಡಿಯ ಕಲ್ಲಡ್ಕ ಎಂಬಲ್ಲಿ 5 ಎಕರೆ 80 ಸೆನ್ಸ್ ಜಾಗ ಇದ್ದು ಈ ಜಾಗದ ವಿಚಾರವಾಗಿ ಕೋರ್ಟ್ ನಲ್ಲಿ ಕೇಸ್ ಕೂಡ ನಡೆಯುತ್ತಿದೆ. 7 ರಿಂದ 8 ಬಾರಿ ಜಡ್ಜ್ ಮೆಂಟ್ ಕೂಡಾ ಆಗಿದೆ. ಇತ್ತೀಚಿಗೆ ಎಸಿ ಕೋರ್ಟ್‌ನಲ್ಲಿ ಯಾವುದೇ ರಾಜಕೀಯ ಒತ್ತಡ ಇದ್ದರೂ ಕೂಡಾ ನಮ್ಮ ಪರವಾಗಿ ನ್ಯಾಯ ಸಿಕ್ಕಿದೆ. ಆದರೆ ಮರುದಿನವೇ 25ರಷ್ಟು ಜನ ಬಂದು ಕುಡಿದ ಮತ್ತಿನಲ್ಲಿ ನಮ್ಮ ಮತ್ತು ಕುಟುಂಬದ ಮೇಲೆ ಹಲ್ಲೆ ಮಾಡಿ ಮಾನಹಾನಿ ಮಾಡಿದ್ದಾರೆ. ನನ್ನ ತಲೆಗೆ, ಹೊಟ್ಟೆ, ಕುತ್ತಿಗೆ, ಬೆನ್ನಿಗೆ ಹಲ್ಲೆ ಮಾಡಿದ್ದಾಗಿ ತಿಳಿಸಿದ್ದಾರೆ.

ಈ ಹಿಂದೆ ಆ ಜಾಗದಲ್ಲಿ ನಾವು ಚಿಕ್ಕ ಟೆಂಟ್ ಹಾಕಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದೆವು. ಆ ವೇಳೆ ಅದನ್ನು ಸಹಿಲಾದರೆ ನಮಗೆ ತೊಂದರೆ ನೀಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಪೊಲೀಸರಿಗೆ ದೂರು ಕೊಡುವುದಕ್ಕೆ ಹೋದರೆ ಅವರು ಪೇಪರ್ ನೋಡುವುದಕ್ಕೂ ತಯಾರು ಇರಲಿಲ್ಲ ಎಂದು ಆರೋಪಿಸಿದ್ದಾರೆ.

ನಮ್ಮ ಜೀವಕ್ಕೆ ಅಪಾಯ ಇದೆ. ಜೊತೆಗೆ ಇದಾದ ಮರುದಿನವೇ ನಮ್ಮ ಪರವಾಗಿ ಜಡ್ಜ್ ಮೆಂಟ್ ಮಾಡಿದ ಇಬ್ಬರು ಸದ್ಯಸರನ್ನು ಹುದ್ದೆಯಿಂದ ತೆಗೆದು ಹಾಕಿದ್ದಾರೆ. ಅವರು ಹೇಳಿದಾಗೆ ಕೇಳುವ ಸದಸ್ಯರನ್ನು ನೇಮಕ ಮಾಡಿದ್ದಾರೆ. ಇದರಲ್ಲಿ ಶಾಸಕ ಸಂಜೀವ ಮಠಂದೂರು ಅವರ ಕೈವಾಡ ಇದೆ. ಶಾಸಕರೇ ಈ ರೀತಿ ಮಾಡಿದರೆ ಜನಸಾಮಾನ್ಯರು ಏನು ಮಾಡ್ಬೇಕು. ಶಾಸಕರದ್ದೇ ಎಲ್ಲಾ ಅಂದಮೇಲೆ ಕೊರ್ಟ್ ಕಚೇರಿ ಯಾಕೆ ಎಲ್ಲಾ ವೆಸ್ಟ್. ಜನಪ್ರನಿಧಿಗಳೇ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಿದರೆ ಜನ ಸಾಮಾನ್ಯರ ಗತಿ ಏನು..? ಎಂದು ಮಹಿಳೆ ತಮ್ಮ ಅಳಲು ತೊಡಿಕೊಂಡಿದ್ದಾರೆ.

representative image

ದೂರಿನಲ್ಲಿ ಏನಿದೆ.?
ಇನ್ನು ಹಲ್ಲೆಗೊಳಗಾದ ಮಹಿಳೆ ಶಕುಂತಲಾ ರೈ ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪುತ್ತೂರು ತಾಲೂಕು ಬೆಳ್ಳಿಪಾಡಿ ಗ್ರಾಮದ ಕಲ್ಲಡ್ಕ ಎಂಬಲ್ಲಿ, ತನ್ನ ತಾಯಿಯವರಿಂದ ಪಿತ್ರಾರ್ಜಿತವಾಗಿ ಬಂದ ಜಾಗದಲ್ಲಿ, ಶಕುಂತಾಳ ಶೆಟ್ಟಿ ಮತ್ತು ಅವರ ತಮ್ಮ ಶ್ವೇತಾ ಪ್ರಕಾಶ್ ರೈ ತಂಗಿಯರಾದ ನವೀನ ರೈ ಮತ್ತು ಜಯಲತಾ ರೈ ರವರಿಗೆ ಹಕ್ಕು ಇದೆ. ಸದ್ಯ ಈ ಜಾಗದಲ್ಲಿ, ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಸುಭಾಶ್‌, ಹರೀಶ್‌, ಪದ್ಮನಾಭ ಗೌಡ ರವರಿಗೆ ತಕರಾರು ನಡೆದು ಬಳಿಕ ನ್ಯಾಯಾಲಯದಲ್ಲಿ ಶಕುಂತಳಾ ರೈ ಪರ ತೀರ್ಪು ಬಂದಿದೆ.

29,11.2022 ರಂದು ಮಧ್ಯಾಹ್ನ 2.15 ಗಂಟೆಗೆ ಶಕುಂತಳಾ ಅವರು ಜೆಸಿಬಿಯಲ್ಲಿ ಜಾಗವನ್ನು ಸಮತಟ್ಟು ಮಾಡುತ್ತಿರುವ ಸಮಯ ಆರೋಪಿಗಳಾದ ಹರೀಶ್‌, ಪದ್ಮನಾಭ ಗೌಡ, ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಪೆರ್ನು ಗೌಡ, ಸುಭಾಶ್ ಮತ್ತು ಇತರರು ಬಂದು ಅವಾಚ್ಯ ಪದಗಳಿಂದ ನಿಂದಿಸಿ ನಿಮ್ಮನ್ನು ಇಲ್ಲಿಯೇ ಹೂತು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಐದು ಮಂದಿಯ ವಿರುದ್ಧ ಎಫ್‌ಐಆರ್‍ ದಾಖಲಾಗಿದೆ. ಇನ್ನು ಶಾಸಕರ ಈ ನಡೆಗೆ ಸಾರ್ವಜನಿಕರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ. ಉಪ್ಪಿನಂಗಡಿ ಗಲಭೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಅನ್ಯಾಯವಾದಾಗ ತೋರದ ಕಾಳಜಿ ಜಾಗದ ತಕರಾರಿಗೆ ಕಾಳಜಿ ವಹಿಸಿದರೇ ಶಾಸಕರು.?? ಎಂದು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

- Advertisement -

Related news

error: Content is protected !!