Sunday, May 5, 2024
spot_imgspot_img
spot_imgspot_img

ಬಂಟ್ವಾಳ: ವೀರಕಂಭದ ರಕ್ಷಿತಾರಣ್ಯದಿಂದ ಅಕ್ರಮ ಗಂಧದ ಮರಗಳ ಮಾರಾಟಕ್ಕೆ ಯತ್ನ; ಆರೋಪಿಗಳು ಸೆರೆ!

- Advertisement -G L Acharya panikkar
- Advertisement -

ಬಂಟ್ವಾಳ: ಅರಣ್ಯವೊಂದರಿಂದ ಲಕ್ಷಾಂತರ ರೂ. ಮೌಲ್ಯದ ಗಂಧದ ಮರಗಳನ್ನು ಕಳವು ಮಾಡಿ, ಕಡಿದು ಮಾರಾಟಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಪಾತೂರು ನಿವಾಸಿ ಇಬ್ರಾಹಿಂ, ಹಾಗೂ ಇರಾ ಗ್ರಾಮದ ಮೊಯಿದ್ದೀನ್‌. ಈ ಕಾರ್ಯಚರಣೆಯ ವೇಳೆ ಇಬ್ಬರು ಆರೋಪಿಗಳು ಸಿದ್ದೀಕ್ ಹಾಗೂ ಸಿದ್ದೀಕ್ ಯಾನೆ ಕೊರಂಗು ಸಿದ್ದೀಕ್ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬಂಟ್ವಾಳ ತಾಲೂಕಿನ ವೀರಕಂಭದ ರಕ್ಷಿತಾರಣ್ಯದಿಂದ ಆರೋಪಿಗಳು ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಗಂಧದ ಮರಗಳನ್ನು ಕಡಿದು ತುಂಡು ಮಾಡಿ ಮಾರಾಟ ಮಾಡಲು ತಯಾರಿ ನಡೆಸಿದ್ದು, ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಮಿಂಚಿನ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಂದಾಜು ಮೂರು ಲಕ್ಷ ಮೌಲ್ಯದ ಗಂಧದ ಮರದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆರೋಪಿಗಳು ಕಾಡು ಪ್ರಾಣಿಯಾದ ಉಡವೊಂದನ್ನು ಹಿಡಿದು ಪದಾರ್ಥ ಮಾಡಲು ತಯಾರಿ ನಡೆಸುತ್ತಿದ್ದರು ಈ ವೇಳೆ ಪ್ರಾಣಿಯನ್ನು ಕೂಡ ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಸ್ಪಷ್ಟವಾದ ಮಾಹಿತಿ ತನಿಖೆಯ ಬಳಿಕ ತಿಳಿಯಬೇಕಾಗಿದೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಯಶೋಧರ, ಪ್ರೀತಮ್ ಎಸ್, ಬಸಪ್ಪ ಹಲಗಾರ್, ಅರಣ್ಯ ರಕ್ಷಕರಾದ ಜಿತೇಶ್, ಶೋಭಿತ್, ದಯಾನಂದ, ರವಿ, ರೇಖಾ, ಅರಣ್ಯ ವೀಕ್ಷಕರಾದ ಪ್ರವೀಣ್, ಚಾಲಕರಾದ ಜಯರಾಮ್ ಪಾಲ್ಗೊಂಡಿದ್ದರು.

- Advertisement -

Related news

error: Content is protected !!