Friday, April 19, 2024
spot_imgspot_img
spot_imgspot_img

ಬೇಯಿಸಿದ ಮೊಟ್ಟೆ ತಿಂದು ಸಾವನ್ನಪ್ಪಿದ ಮಹಿಳೆ

- Advertisement -G L Acharya panikkar
- Advertisement -
driving

ಹೈದರಾಬಾದ್: ಒಂದು ಸಣ್ಣ ಕೋಳಿ ಮೊಟ್ಟೆ ಮಹಿಳೆಯೊಬ್ಬಳ ಪ್ರಾಣವನ್ನು ನುಂಗಿ ಹಾಕಿದೆ. ಊಟದ ವೇಳೆ ಬೇಯಿಸಿದ ಮೊಟ್ಟೆ ತಿನ್ನುವಾಗ ಮೊಟ್ಟೆ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

ಈ ಘಟನೆ ತೆಲಂಗಾಣದ ನೇರಳಪಲ್ಲಿಯಲ್ಲಿ ನಡೆದಿದ್ದು,
ನೀಲಮ್ಮ ಮೃತ ಮಹಿಳೆ. ನೀಲಮ್ಮ ಊಟ ಮಾಡುತ್ತಿದ್ದಳು. ಈ ವೇಳೆ ಬೇಯಿಸಿದ ಮೊಟ್ಟೆಯನ್ನು ಕತ್ತರಿಸದೇ, ಹಾಗೇ ಬಾಯಿಯೊಳಗೆ ಹಾಕಿಕೊಂಡಿದ್ದಾಳೆ. ಈ ವೇಳೆ ಮೊಟ್ಟೆ ನೇರವಾಗಿ ಗಂಟಲಿಗೆ ಹೋಗಿ ಅಲ್ಲಿ ಅನ್ನನಾಳ ಲಾಕ್ ಆಗಿದೆ. ಆಗ ಮೊಟ್ಟೆ ಗಂಟಲಿನಿಂದ ಕೆಳಗೆ ಜಾರದೇ, ಹೊರಗೆ ಕೂಡಾ ಬಾರದೇ ನೀಲಮ್ಮನಿಗೆ ಉಸಿರಾಡಲು ಕಷ್ಟವಾಗಿದೆ. ಅಲ್ಲಿ ವಿಂಡ್ ಪೈಪ್ ಪ್ರೆಸ್ಸ್ ಆದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ.

ಯಕಶ್ಚಿತ್ ಒಂದು ಮೊಟ್ಟೆ ಸಾವಿಗೆ ಸಾಧನವಾಗಿದ್ದು ದುರಂತವೇ ಸರಿ. ಮೊಟ್ಟೆಯನ್ನು ಅವಸರದಲ್ಲಿ ತಿನ್ನಲು ಹೋಗದೆ ಕತ್ತರಿಸಿ ತಿಂದಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ ಎಂದು ನೀಲಮ್ಮ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

driving
- Advertisement -

Related news

error: Content is protected !!