Friday, March 29, 2024
spot_imgspot_img
spot_imgspot_img

ಬಿ.ಸಿ.ರೋಡ್: ಸಮುದಾಯದತ್ತ ಸಾಂತ್ವನ- ಸಮಾಲೋಚನೆ- ಸಂವಾದ- ಸಂಕಲ್ಪ ಸಭೆ

- Advertisement -G L Acharya panikkar
- Advertisement -
vtv vitla

ಬಿ.ಸಿ ರೋಡ್‌: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜನ ಶಿಕ್ಷಣ ಟ್ರಸ್ಟ್ ಸಾಂತ್ವನ ಕೇಂದ್ರ ಬಂಟ್ವಾಳ ಇವುಗಳ ಸಹಯೋಗದಲ್ಲಿ ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ಸಮುದಾಯದತ್ತ ಸಾಂತ್ವನ- ಸಮಾಲೋಚನೆ- ಸಂವಾದ- ಸಂಕಲ್ಪ ಸಭೆಯು ಬಿ.ಸಿ ರೋಡ್ ಶ್ರೀ ಶಕ್ತಿ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಆಶಯ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.

ಸಭೆಯಲ್ಲಿ ಜನಶಿಕ್ಷಣ ಟ್ರಸ್ಟ್‌ನ ಯೋಜನಾ ವ್ಯವಸ್ಥಾಪಕರಾದ ಕೃಷ್ಣ ಮೂಲ್ಯರವರು ಸರಕಾರದ ಸಾಂತ್ವನ, ಉದ್ದೇಶ, ಸೇವೆ, ಸೌಲಭ್ಯಗಳ ಬಗ್ಗೆ ಸುಸ್ತರವಾದ ಮಾಹಿತಿ ನೀಡಿದರು.

ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ, ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿಯವರು ಚರ್ಚೆ ಪ್ರಾರಂಭಿಸಿ ಹಲವು ಪ್ರಕರಣಗಳನ್ನು ವಿವರಿಸುತ್ತಾ ಸಾಂತ್ವನ ಯೋಜನೆ ಸಮುದಾಯದತ್ತ ಸಾಗಿ ಮನೆ ಮಾತಾಗಬೇಕು ಎಂದು ಮಾರ್ಗದರ್ಶನ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಬಾಯಿ ಕಂಬಳಿಯವರು ಮಾತನಾಡಿ ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು ಆಗ ಮಾತ್ರ ಸಮಸ್ಯೆ ತಳಮಟ್ಟದಲ್ಲಿರುವಾಗಲೇ ಎಚ್ಚೆತ್ತುಕೊಂಡು ತೀವ್ರ ಮಟ್ಟಕ್ಕೆ ಹೋಗದಂತೆ ತಡೆಯಬಹುದೆಂದು ಹೇಳಿದರು.

ಸಂರಕ್ಷಣಾಧಿಕಾರಿ ಭಾರತಿ ಮಾತನಾಡಿ ಜೀವನ ಕೌಶಲ್ಯದ ಅರಿವು ಮೂಡಿಸುವ ಕೆಲಸ ಶಾಲಾ ಮಟ್ಟದಲ್ಲಿಯೇ ಗಂಡು-ಹೇಣ್ಣು ಮಕ್ಕಳಿಗಿಬ್ಬರಿಗೂ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ನಿವೃತ್ತ ಶಿಶು ಯೋಜನಾಧಿಕಾರಿ, ವಿಟ್ಲ ವಲಯದ ಹಿರಿಯ ಅಂಗನವಾಡಿ ಮೇಲ್ವಿಚಾರಕಿ, ಕನ್ನಡ ಪ್ರಭಾ ಪತ್ರಕರ್ತರು, ಹಲವು ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರುಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಫಲ್ಗುಣಿ ವಿವಿದ್ಧೋದೇಶ ಸಹಕಾರಿ ಸಂಘ ಬಂಟ್ವಾಳ ಇದರ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಬ್ಲಾಕ್ ಸೊಸೈಟಿ ಅಧ್ಯಕ್ಷರು, ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಸದಸ್ಯರು, ಕರ್ನಾಟಕ ರಾಜ್ಯ ಸಂಚಲನ ಸಮನ್ವಯ ಸಮಿತಿ ಕಾರ್ಯಕಾರಿ ಡೀಡ್ಸ್ ಸಂಸ್ಥೆಯ ಸದಸ್ಯರು, ಎಂ ಬಿ ಕೆ ಯವರು, ಎಲ್.ಸಿ.ಆರ್.ಪಿ ಯವರು, ಸೇರಿದಂತೆ ಹಲವು ಜನರು ಉಪಸ್ಥಿತರಿದ್ದರು.

- Advertisement -

Related news

error: Content is protected !!