Saturday, April 27, 2024
spot_imgspot_img
spot_imgspot_img

ಭಗವತೀ ದೇವಸ್ಥಾನದ ಕಟ್ಟಡಕ್ಕೆ ಹಸಿರು ಬಣ್ಣ..! ಮುಸ್ಲಿಮರೇ ಇರುವ ಸಮಿತಿಯ ನಡೆಗೆ ತೀವ್ರ ಆಕ್ರೋಶ..!

- Advertisement -G L Acharya panikkar
- Advertisement -

ಕೇರಳದಲ್ಲಿನ ಪ್ರಸಿದ್ಧ ಭಗವತೀ ಕ್ಷೇತ್ರಕ್ಕೆ ಹಸಿರು ಬಣ್ಣ ಬಳಿದಿದ್ದು ಅಸಂಖ್ಯಾತ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮಲಪ್ಪುರಂನ ಅಂಗಡಿಪುರಂ ಶ್ರೀ ತಿರುಮಂಧಮಕುನ್ ದೇವಸ್ಥಾನದ ಕಚೇರಿ ಕಟ್ಟಡಕ್ಕೆ ಹಸಿರು ಬಣ್ಣ ಬಳಿದಿದ್ದು ಸಮಿತಿಯ ನಡೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.

ಮಲಬಾರ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ಈ ದೇವಸ್ಥಾನ ಸಮಿತಿಯಲ್ಲಿ ಸಿಪಿಎಂ ಕಾರ್ಯಕರ್ತರೇ ಹೆಚ್ಚಾಗಿದ್ದಾರೆ. ತಿರುಮಂಧಮಕುನ್ ಭಗವತಿ ದೇವಸ್ಥಾನವು ಕೇರಳದ ಮೂರು ಪ್ರಮುಖ ಭದ್ರಕಾಳಿ ದೇವಾಲಯಗಳಲ್ಲಿ ಒಂದಾಗಿದೆ.

ಇನ್ನು ಏಪ್ರಿಲ್‌ನಲ್ಲಿ ನಡೆಯುವ ಉತ್ಸವಕ್ಕೆ ಸಮಿತಿ ರಚಿಸಲಾಗಿದೆ. ಉತ್ಸವದ ನಿಮಿತ್ತ ರಚಿಸಲಾಗಿದ್ದ ಸಮಿತಿಗೂ ಸಾಕಷ್ಟು ಟೀಕೆ ಶುರುವಾಗಿದೆ. ಉತ್ಸವ ಸಂಘಟನಾ ಸಮಿತಿಯಲ್ಲಿ ಸಂಸದ ಅಬ್ದುಲ್ ಸಮದ್ ಸಮದಾನಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರಫೇಖಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಹರ್ಬಾನ್, ಗ್ರಾ.ಪಂ ಅಧ್ಯಕ್ಷೆ ಸಯೀದಾ, ಮಂಜಾಲಂಕುಳಿ ಅಲಿ ಮೊದಲಾದವರು ಇದ್ದಾರೆ.

ಮುಸ್ಲಿಂ ಪ್ರಾಬಲ್ಯದ ಜಿಲ್ಲೆಯಲ್ಲಿ ಹಿಂದೂಗಳ ನಂಬಿಕೆ ಅವಮಾನ..!
ಈ ವಿಚಾರವಾಗಿ ದೇವಸ್ಥಾನದ ಚಿತ್ರವನ್ನು ಶೇರ್ ಮಾಡಿರುವ ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್ ಟೀಕೆ ಮಾಡಿದ್ದರು.
ಇನ್ನು ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಹಸಿರು ಬಣ್ಣದ ಮೇಲೆ ಬಿಳಿ ಬಣ್ಣ ಬಳಿಯುವ ಕೆಲಸವೂ ನಡೆದಿದೆ ಎನ್ನಲಾಗುತ್ತಿದೆ.

ತಿರುಮಂಧಮಕುನ್ ದೇವಸ್ಥಾನ ಸಮಿತಿಯು ಈ ಹಿಂದೆಯೂ ವಿವಾದಗಳಲ್ಲಿ ಸಿಲುಕಿತ್ತು. 2021ರಲ್ಲಿ ನಡೆದ ಪುರಂನಲ್ಲಿ ದೇವಸ್ವಂ ಕಾರ್ಯನಿರ್ವಾಹಕ ಅಧಿಕಾರಿಯ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದು ದೊಡ್ಡ ವಿವಾದವಾಗಿತ್ತು. ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೇಕ್ ಕತ್ತರಿಸಿ ದೇವಸ್ಥಾನದ ಸಿಬ್ಬಂದಿಗೆ ಹಂಚುವ ಮೂಲಕ ಪುನರುಜ್ಜೀವನದ ಹೊಸ ಹೆಜ್ಜೆಗಳನ್ನು ಮೂಡಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಇತ್ತು.

- Advertisement -

Related news

error: Content is protected !!