Thursday, May 9, 2024
spot_imgspot_img
spot_imgspot_img

ಪಾದಚಾರಿಗೆ ಬೈಕ್‌ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಮೃತ್ಯು..!

- Advertisement -G L Acharya panikkar
- Advertisement -

ಮತದಾನ ಮಾಡಿ ತೆರಳುತ್ತಿದ್ದ ವೇಳೆ ಅಪಘಾತ ನಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ನಂಜನಗೂಡು ತಾಲೂಕಿನ ತಾಂಡವಪುರ ಬಳಿ ನಡೆದಿದೆ.

ಮೃತಪಟ್ಟವರನ್ನು ಶಿವಣ್ಣ (40) ಹಾಗೂ ಬೈಕ್ ಸವಾರ ಮಿಥುನ್(19) ಎಂದು ಗುರುತಿಸಲಾಗಿದೆ.

ಪಾದಚಾರಿಗೆ ಬೈಕ್‌ ಡಿಕ್ಕಿ ಹೊಡೆದಿದ್ದರಿಂದ ಪಾದಚಾರಿ ಮತ್ತು ಬೈಕ್‌ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಅನಿಲ್ ಪಟೇಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಿವಣ್ಣ ಮತ ಚಲಾಯಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ವೇಗವಾಗಿ ಬಂದ ಯುವಕರು, ನಡೆದು ತೆರಳುತ್ತಿದ್ದ ಶಿವಣ್ಣಗೆ ಡಿಕ್ಕಿ ಹೊಡೆದಿದ್ದರಿಂದ ಶಿವಣ್ಣ ಹಾಗೂ ಮಿಥುನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!