Thursday, May 16, 2024
spot_imgspot_img
spot_imgspot_img

ಭಾರತದ ದೂರಸಂಪರ್ಕ ವಲಯಕ್ಕೆ ಕಸುವು ತುಂಬಿದ ಟ್ರಾಯ್ ಬಗ್ಗೆ ಪ್ರಧಾನಿ ಮೋದಿ ಗುಣಗಾನ

- Advertisement -G L Acharya panikkar
- Advertisement -

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (Trai) 25ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೇ 17ನೇ ತಾರೀಕಿನ ಮಂಗಳವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎಂಟು ವರ್ಷಗಳಲ್ಲಿ ಭಾರತವು 5 “R”ಗಳ ಮೂಲಕ ದೂರಸಂಪರ್ಕ ವಲಯದಲ್ಲಿ ಹೊಸ ಶಕ್ತಿಯನ್ನು ತುಂಬಿದೆ ಎಂದು ಹೇಳಿದರು. ಅದನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ TRAI ಅನ್ನು ಶ್ಲಾಘಿಸಿದರು. “ರೀಚ್, ರಿಫಾರ್ಮ್, ರೆಗ್ಯುಲೇಟ್, ರೆಸ್ಪಾಂಡ್ ಮತ್ತು ರೆವಲ್ಯೂಷನ್ (ಕ್ರಾಂತಿಯ) ಮೂಲಕ ನಮ್ಮ ದೇಶದ ದೂರಸಂಪರ್ಕ ವಲಯದಲ್ಲಿ ಹೊಸ ಶಕ್ತಿಯನ್ನು ತುಂಬಿದ್ದೇವೆ. ಈ ಸಾಧನೆಯಲ್ಲಿ TRAI ಮಹತ್ವದ ಪಾತ್ರವನ್ನು ವಹಿಸಿದೆ,” ಎಂದು ಪ್ರಧಾನಿ ಮೋದಿ ಅವರು ಬೆಳ್ಳಿ ಹಬ್ಬದ ನಿಮಿತ್ತ ನಿಯಂತ್ರಕ ಸಂಸ್ಥೆಯನ್ನು ಗುರುತಿಸುವ ಸಮಾರಂಭದಲ್ಲಿ ವರ್ಚುವಲ್ ಆಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 5G ತಂತ್ರಜ್ಞಾನಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಇದು ದೇಶದಲ್ಲಿ ಆಡಳಿತವನ್ನು ಹೇಗೆ ನಡೆಸಬೇಕು ಎಂಬುದನ್ನು ಪಾಸಿಟಿವ್ ಆಗಿ ಬದಲಾಯಿಸುತ್ತದೆ ಎಂದು ಅವರು ಹೇಳಿದರು. “ಇದು ಉದ್ಯಮದ ಸುಲಭತೆ ಜತೆಗೆ ಬದುಕು ಸುಲಭ ಆಗಿಸುತ್ತದೆ. ಕೃಷಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತದೆ. ಈ ತಂತ್ರಜ್ಞಾನವು ಕೆಲಸಗಳನ್ನು ಸುಲಭಗೊಳಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ,” ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

“21ನೇ ಶತಮಾನದಲ್ಲಿ ಸಂಪರ್ಕವು ಭಾರತದ ಪ್ರಗತಿಯ ವೇಗವನ್ನು ನಿರ್ಧರಿಸುತ್ತದೆ. ಆದ್ದರಿಂದ ಎಲ್ಲ ಹಂತಗಳಲ್ಲಿ ಸಂಪರ್ಕವನ್ನು ಆಧುನೀಕರಿಸುವುದು ಅತ್ಯಗತ್ಯ” ಎಂದು ಅವರು ಹೇಳಿದರು. ಈ ಸಂದರ್ಭದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ ಮೋದಿ, ಬಡ ಕುಟುಂಬಗಳಿಗೂ ಮೊಬೈಲ್ ಫೋನ್ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಲು ಸರ್ಕಾರವು ಮೊಬೈಲ್ ಫೋನ್‌ಗಳನ್ನು ದೇಶೀಯವಾಗಿ ತಯಾರಿಸಲು ಒತ್ತು ನೀಡಿದೆ ಎಂದರು. ಇದರ ಪರಿಣಾಮವಾಗಿ ನಾವು ಈಗ 200ಕ್ಕೂ ಹೆಚ್ಚು ಮೊಬೈಲ್ ಉತ್ಪಾದನಾ ಘಟಕಗಳನ್ನು ಹೊಂದಿದ್ದೇವೆ, ಈ ಹಿಂದೆ ಕೇವಲ ಎರಡು ಇದ್ದವು,” ಎಂದು ಅವರು ಹೇಳಿದರು.

TRAI (ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಬಗ್ಗೆ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಭಾರತದಲ್ಲಿ ದೂರಸಂಪರ್ಕ ವಲಯವನ್ನು ನಿಯಂತ್ರಿಸುತ್ತದೆ. ಇದನ್ನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಾಯ್ದೆ 1997ರ ಸೆಕ್ಷನ್ 3ರ ಅಡಿಯಲ್ಲಿ ಭಾರತ ಸರ್ಕಾರವು ಸ್ಥಾಪಿಸಿದೆ. ಕೇಂದ್ರ ಸರ್ಕಾರದ ದೂರಸಂಪರ್ಕ ಸಚಿವಾಲಯದ ದೂರಸಂಪರ್ಕ ಇಲಾಖೆ ಅಡಿಯಲ್ಲಿ TRAI ಕಾರ್ಯ ನಿರ್ವಹಿಸುತ್ತದೆ.

- Advertisement -

Related news

error: Content is protected !!